BIG NEWS: ಜಿಟಿಡಿ ಏನು ಕಡೆದು ಕಟ್ಟೆ ಹಾಕಿದ್ದಾನೆ; ಏಕವಚನದಲ್ಲಿ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು, ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ 3 ಬಾರಿ ಶಾಸಕರಾಗಿದ್ದಾರೆ. 3 ಬಾರಿ ಗೆದ್ದು ಏನು ಕಡೆದು ಕಟ್ಟೆ ಹಾಕಿದ್ದಾನೆ? ಎಂದು ಸಿಎಂ ಸಿದ್ದರಾಮಯ್ಯ ಜಿ.ಟಿ.ದೇವೇಗೌಡ ವಿರುದ್ಧ ವಾಕ್ಪ್ರಹಾರ ನಡೆಸಿದ್ದಾರೆ.

ಈ ಹಿಂದೆ ಮೈತ್ರಿ ಇದ್ದರೂ ದಳದವರು ನಮಗೆ ವೋಟ್ ಹಾಕಿಲ್ಲ. ಈಬಾರಿ ಮೈಸೂರಿನಲ್ಲಿ ಒಕ್ಕಲಿಗರನ್ನೇ ನಿಲ್ಲಿಸಿದ್ದೇವೆ. ಈ ಬಾರಿ ಗೆಲ್ಲಿಸಬೇಕು ಎಂದು ಕರೆ ನೀಡಿದರು. 2018ರಲ್ಲಿ ನನ್ನನ್ನು ಸೋಲಿಸಲಿಕ್ಕೆ ನಮ್ಮವರೇ ಹೆಚ್ಚು ಕಾರಣರಾದ್ರು ಎಂದು ತಮ್ಮ ಸೋಲಿನ ದಿನಗಳನ್ನು ನೆನಪಿಸಿಕೊಂಡರು.

ಮೂರು ಬಾರಿ ಗೆದ್ದಿರುವ ಜಿಟಿಡಿ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾನೆ? ಮೈಸೂರಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ನಾವು ಎಂದು ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read