ಊಟಕ್ಕಾಗಿ ಮತಗಟ್ಟೆಯ ಬಾಗಿಲು ಬಂದ್ ಮಾಡಿ ಮತದಾನ ನಿಲ್ಲಿಸಿದ ಸಿಬ್ಬಂದಿ; ಸಾರ್ವಜನಿಕರ ಆಕ್ರೋಶ

ಧಾರವಾಡ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ  ಬಿರುಸಿನಿಂದ ಸಾಗಿದ್ದು, ಈ ಮಧ್ಯೆ ಊಟಕ್ಕಾಗಿ ಮತದಾನ ಪ್ರಕ್ರಿಯೆಯನ್ನು ನಿಲ್ಲಿಸಿ, ಮತಗಟ್ಟೆ ಬಾಗಿಲು ಬಂದ್ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಮತಗಟ್ಟೆ ಸಂಖ್ಯೆ 180ರಲ್ಲಿ ಚುನಾವಣಾ ಸಿಬ್ಬಂದಿ ಮಧ್ಯಾಹ್ನದ ಊಟಕ್ಕೆಂದು ಮತಗಟ್ಟೆಯ ಬಾಗಿಲು ಹಾಕಿ ಬಂದ್ ಮಾಡಿದ್ದು, ಒಳಗಡೆ ಸಿಬ್ಬಂದಿಗಳು ಊಟ ಮಾಡುತ್ತಿದ್ದರೆ ಮತದಾರರು ಉರಿಬಿಸಿಲಿನಲ್ಲಿ ಮತಗಟ್ಟೆ ಹೊರಗೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂದಿದೆ. ಧಾರವಾಡದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ.

ಚುನವಣಾ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರ್ಧಗಂಟೆ ಮತಗಟ್ಟೆ ಬಾಗಿಲು ಬಂದ್ ಮಾಡಿ ಮತದಾನ ನಿಲ್ಲಿಸಿದ್ದಕ್ಕೆ ಅರ್ಧಗಂಟೆ ಹೆಚ್ಚು ಸಮಯ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read