BIG NEWS: ಚುನಾವಣಾ ಆಯೋಗದಿಂದ ಬರೋಬ್ಬರಿ 4,658 ಕೋಟಿ ಮೌಲ್ಯದ ವಸ್ತುಗಳು ಜಪ್ತಿ

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮಾತದಾರರನ್ನು ಓಲೈಸಲು ರಾಜಕೀಯ ಪಕ್ಷಗಳ ಮುಖಂಡರು ಕಸರತ್ತು ನಡೆಸಿದ್ದಾರೆ. ಚುನಾವಣೆ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಎಲೆಕ್ಷನ್ ಕಮಿಷನ್ ತೀವ್ರ ನಿಗಾ ವಹಿಸಿದೆ. ಈ ನಿಟ್ಟಿನಲ್ಲಿ ಮಾರ್ಚ್ ನಿಂದ ಏಪ್ರಿಲ್ 13ರವರೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಮಾರ್ಚ್ 1 ರಿಂದ ಏಪ್ರಿಲ್ 13ರವರೆಗೆ ವಿವಿಧ ಏಜೆನ್ಸಿಗಳ ಸಹಾಯದಿಂದ 4,658 ಕೋಟಿ ಮೌಲ್ಯದ ಹಣ, ಹೆಂಡ, ಚಿನ್ನ, ಬೆಳ್ಳಿ, ಡ್ರಗ್ಸ್ ಇತ್ಯಾದಿಗಳನ್ನು ಜಪ್ತಿ ಮಡಲಾಗಿದೆ.

ಈ ವಸ್ತುಗಳಲ್ಲಿ ಮಾದಕ ವಸ್ತುಗಳ ಪ್ರಮಣವೇ ಹೆಚ್ಚಿದೆ. 395 ಕೋಟಿ ನಗದು ಹಣ, 489 ಕೋಟಿ ಮೌಲ್ಯದ ಹೆಂಡ, 2,069 ಕೋಟಿ ಮೌಲ್ಯದ ಡ್ರಗ್ಸ್, 562 ಕೋಟಿ ಮೌಲ್ಯದ ಅಮೂಲ್ಯ ಲೋಹಗಳು, 1143 ಕೋಟಿ ಮೌಲ್ಯದ ಉಡುಗೊರೆಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read