BIG NEWS: 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ; 10 ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಳಿಕೆ ಬಿಡುಗಡೆ ಮಾಡಿದ್ದು, ಹಲವು ಭರವಸೆಗಳನ್ನು ನೀಡಿದೆ.

ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 70 ವರ್ಷ ಮೇಲ್ಪಟ್ಟವರಿಗೂ ಕೂಡ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದರು.

ಔಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿಯೊಂದಿಗೆ ಔಷಧ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಭವಿಷ್ಯದಲ್ಲಿ 10 ಕೋಟಿ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನ್ಗಳನ್ನು ಪಡೆಯಲಿದ್ದಾರೆ. ಸಹಕಾರದೊಂದಿಗೆ ಸಮೃದ್ಧಿ ಎಂಬ ಪರಿಕಲ್ಪನೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಹಕಾರ ನೀತಿಯನ್ನು ಪರಿಚಯಿಸಲಿದೆ. ದೇಶಾದ್ಯಂತ ಹೈನುಗಾರಿಕೆ ಹಾಗೂ ಸಹಕಾರ ಸಂಘಗಳನ್ನು ಹೆಚ್ಚಿಸಲಾಗುವುದು.

ಬಡವರಿಗಾಗಿ ಇನ್ನೂ 3 ಕೋಟಿ ಮನೆಗಳ ನಿರ್ಮಾಣ ಮಾಡಲಾಗುವುದು. ಪ್ರತಿ ಮನೆಗೂ ಅಗ್ಗದ ಪೈಪ್ಡ್ ಅಡುಗೆ ಅನಿಲ ತಲುಪಿಸಲಾಗುವುದು.

ಮುದ್ರಾ ಯೀಜನೆಯಡಿ ಸಿಗುವ ಸಾಲದ ಪ್ರಮಾಣ ಹೆಚ್ಚಿದ್ಸಲಾಗುವುದು. ಮುದ್ರಾ ಯೋಜನೆಯ ಮೊದಲ ಸಾಲ 10 ಲಕ್ಷ ರೂ ಮಿತಿಯನ್ನು 20 ಲಕ್ಷಕ್ಕೆ ಹೆಚ್ಚಿಸಲಾಗುವುದು.

ವಂದೇ ಭಾರತ್ ರೈಲುಗಳನ್ನು ದೇಶದ ಮೂಲೆ ಮೂಲೆಗೆ ವಿಸ್ತರಣೆ. ವಂದೇ ಭಾರತ್ ನ ಮೂರು ಮಾದರಿಯ ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್ ಕಾರ್ ಹಾಗೂ ವಂದೇ ಭಾರತ್ ಮೆಟ್ರೋ ರೈಲುಗಳನ್ನು ಜಾರಿಗೆ ತರಲಾಗುವುದು.

ಅಹಮದಾಬಾದ್-ಮುಂಬೈ ಬುಲೆಟ್ ಟ್ರೈನ್ ಬಹುತೇಕ ಮುಕ್ತಾಯ ಹಂತದಲ್ಲಿದೆ. ಇದೇ ರೀತಿ ಉತ್ತರ ಭಾರತದಲ್ಲಿ ಒಂದು ಬುಲೆಟ್ ರೈಲು, ದಕ್ಷಿಣ ಭಾರತದಲ್ಲಿ ಒಂದು ಬುಲೆಟ್ ರೈಲು, ಪೂರ್ವ ಭಾರತದಲ್ಲಿ ಒಂದು ಬುಲೆಟ್ ರೈಲು ಸಂಚರಿಸಲಿದ್ದು, ಇದ್ದಕ್ಕಾಗಿ ಶೀಘ್ರದಲ್ಲಿ ಸಿದ್ಧತೆ ಆರಂಭವಾಗಲಿದೆ ಎಂದು ಹೇಳಿದರು.

ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಅಡಿಯಲ್ಲಿ ನಾವು ಮುನ್ನಡೆಯಲಿದ್ದೇವೆ. ದೇಶದ ಹಿತಾಸಕ್ತಿಗಾಗಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಬಿಜೆಪಿ ಸಮಾನವಾಗಿ ಪರಿಗಣಿಸುತ್ತದೆ.

ಪ್ರಪಂಚದಾದ್ಯಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ ಮಾಡಲಾಗುವುದು. ಪುರಾತನ ಭಾಷೆ ತಮಿಳು ವರ್ಚಸ್ಸು ಹೆಚ್ಚಿಸಲು ಬಿಜೆಪಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಕೋಟ್ಯಂತರ ಕುಟುಂಬಗಳಿಗೆ ಸೋಲಾರ್ ಮೂಲಕ ಉಚಿತ ವಿದ್ಯುತ್ ವ್ಯವಸ್ಥೆ

ಮಂಗಳಮುಖಿಯರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ

10 ಕೋಟಿ ಮಹಿಳೆಯರುಗೆ ಉದ್ಯೋಗ, ಉದ್ಯಮ ಕುರಿತ ಕೌಶಲ ತರಬೇತಿ

3 ಕೋಟಿ ಮಹಿಳೆಯರಿಗೆ ಲಕ್ ಪತಿ ದೀದಿ ಯೋಜನೆಯ ಗ್ಯಾರಂಟಿ

ಕ್ರೀಡೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಲು ಹೊಸ ಯೋಜನೆಗಳ ಜಾರಿ
2036ರಲ್ಲಿ ಒಲಂಪಿಕ್ ಆತಿಥ್ಯ
ಮಹಿಳಾ ಮೀಸಲಾತಿ ಜಾರಿ ಸೇರಿದಂತೆ ಹಲವು ಭರವಸೆಗಳನ್ನು ಘೋಷಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read