ನೀತಿ ಸಂಹಿತೆ ಉಲ್ಲಂಘನೆ: ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

ಕೊಯಮತ್ತೂರು: ಬಿಜೆಪಿ ತಮಿಳುನಾಡು ಅಧ್ಯಕ್ಷ ಮತ್ತು ಕೊಯಮತ್ತೂರು ಅಭ್ಯರ್ಥಿ ಕೆ. ಅಣ್ಣಾಮಲೈ ಮತ್ತು ಪಕ್ಷದ ಇತರ ಕೆಲವು ಸದಸ್ಯರ ವಿರುದ್ಧ ಚುನಾವಣಾ ಪ್ರಚಾರದ ಸಮಯ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ರಾತ್ರಿ ಚುನಾವಣಾ ಆಯೋಗದ ನಿಗದಿತ ಸಮಯ ಮೀರಿ ಬಿಜೆಪಿ ಪ್ರಚಾರ ನಡೆಸುವುದನ್ನು ಡಿಎಂಕೆ ಕಾರ್ಯಕರ್ತರು ಮತ್ತು ಅವರ ಮಿತ್ರಪಕ್ಷಗಳಾದ ಎಡಪಕ್ಷಗಳು ಆಕ್ಷೇಪಿಸಿದ ನಂತರ ಇದು ಅವರಂಪಾಲಯಂ ಪ್ರದೇಶದಲ್ಲಿ ಎರಡು ಕಡೆಯ ನಡುವೆ ಜಗಳಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಎಂಕೆ ಸದಸ್ಯರೊಬ್ಬರು ನೀಡಿದ ದೂರಿನ ಮೇರೆಗೆ ಪೀಲಮೇಡು ಪೊಲೀಸರು ನಾಲ್ವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

 

ಏತನ್ಮಧ್ಯೆ, ಚುನಾವಣಾ ಆಯೋಗವು ನಿಗದಿಪಡಿಸಿದ ಗಡುವನ್ನು ಮೀರಿ ಪ್ರಚಾರ ನಡೆಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಡಿಎಂಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕೊಯಮತ್ತೂರು ಕ್ಷೇತ್ರದಿಂದ ಅಣ್ಣಾಮಲೈ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿ ಡಿಎಂಕೆಯ ಗಣಪತಿ ರಾಜ್‌ಕುಮಾರ್ ಮತ್ತು ಎಐಎಡಿಎಂಕೆಯ ಸಿಂಗೈ ರಾಮಚಂದ್ರನ್ ವಿರುದ್ಧ ತ್ರಿಕೋನ ಸ್ಪರ್ಧೆಯಲ್ಲಿರುವ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read