ಬೆಂಗಳೂರು : ಬೆಂಗಳೂರಿನ ಶಾಲೆಯ ಶೌಚಾಲಯದಲ್ಲಿ ಪಟಾಕಿ ಸ್ಪೋಟಗೊಂಡಿದ್ದು, ಬಾಂಬ್ ಅಂತ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಹೌದು, ಶೌಚಾಲಯದಲ್ಲಿ ವಿದ್ಯಾರ್ಥಿಗಳು ಪಟಾಕಿ ಹೊಡೆದಿದ್ದು, ಭಾರಿ ಶಬ್ದಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬನ್ನೇರುಘಟ್ಟ ಬಳಿಯ ಬಿ ಎಸ್ ಬಂಗೀಪುರದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಭಾರಿ ಶಬ್ದ ಕೇಳಿಬಂದಾಗ ಶಾಲೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಸ್ಪೋಟಗೊಂಡಿದ್ದು ಪಟಾಕಿ ಎಂದು ತಿಳಿದು ಬಂದಿದೆ.
ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಆಡಳಿತ ಮಂಡಳಿ ಸಿಬ್ಬಂದಿಗಳನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ.
