ʼಕೋವಿಡ್‌ʼ ಊಹಿಸಿದ್ದವನಿಂದ ಮತ್ತೊಂದು ಭೀಕರ ಭವಿಷ್ಯ !

ಜಗತ್ತು ಅಪಾಯಕಾರಿ ಸಂಘರ್ಷದ ಅಂಚಿನಲ್ಲಿದೆ! ‘ಜೀವಂತ ನೊಸ್ಟ್ರಡಾಮಸ್’ ಎಂದು ಕರೆಸಿಕೊಳ್ಳುವ ಅಥೋಸ್ ಸಲೋಮ್, ಮೂರನೇ ಮಹಾಯುದ್ಧದ ಭೀಕರ ಭವಿಷ್ಯ ನುಡಿದಿದ್ದಾರೆ. ಕೋವಿಡ್-19, ರಾಣಿ ಎಲಿಜಬೆತ್ II ಸಾವು ಮತ್ತು ಉಕ್ರೇನ್ ಯುದ್ಧದಂತಹ ಘಟನೆಗಳನ್ನು ಭವಿಷ್ಯ ನುಡಿದಿರುವುದಾಗಿ ಹೇಳಿಕೊಂಡಿರುವ ಸಲೋಮ್, ಇತ್ತೀಚಿನ ಜಾಗತಿಕ ವಿದ್ಯಮಾನಗಳು ಅಪಾಯಕಾರಿ ಭೌಗೋಳಿಕ ರಾಜಕೀಯ ಮಾದರಿಯನ್ನು ಸೂಚಿಸುತ್ತಿವೆ ಎಂದು ಎಚ್ಚರಿಸಿದ್ದಾರೆ.

ಬಾಲ್ಟಿಕ್ ಸಮುದ್ರದಲ್ಲಿನ ಕೇಬಲ್ ಹಾನಿ, ದಕ್ಷಿಣ ಚೀನಾ ಸಮುದ್ರದಲ್ಲಿನ ಉದ್ವಿಗ್ನತೆ ಮತ್ತು ಹೈಬ್ರಿಡ್ ಯುದ್ಧದಂತಹ ಅಂಶಗಳನ್ನು ಉಲ್ಲೇಖಿಸಿರುವ ಸಲೋಮ್, ಇವು ಮೂರನೇ ಮಹಾಯುದ್ಧಕ್ಕೆ ನಾಂದಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಸಮುದ್ರದೊಳಗಿನ ಕೇಬಲ್‌ಗಳು ಆಧುನಿಕ ಸಂವಹನ ವ್ಯವಸ್ಥೆಯ ಬೆನ್ನೆಲುಬು. ಇವು ನಾಶವಾದರೆ ಡಿಜಿಟಲ್ ಬ್ಲ್ಯಾಕ್‌ಔಟ್ ಆಗಬಹುದು, ಇದು ಮಿಲಿಟರಿ ಸಾಮರ್ಥ್ಯ ಮತ್ತು ಆರ್ಥಿಕತೆಯನ್ನು ಹಾಳು ಮಾಡಬಹುದು” ಎಂದು ಸಲೋಮ್ ಎಚ್ಚರಿಸಿದ್ದಾರೆ.

ಹಿಂದಿನ ವಿಶ್ವಯುದ್ಧಗಳ ಉದಾಹರಣೆಗಳನ್ನು ನೀಡುತ್ತಾ, ಪ್ರಮುಖ ಸಂಘರ್ಷಗಳು ಸಣ್ಣ ಘಟನೆಗಳಿಂದ ಆರಂಭವಾಗಬಹುದು ಎಂದು ಸಲೋಮ್ ಹೇಳಿದ್ದಾರೆ. ನ್ಯಾಟೋ ಮತ್ತು ರಷ್ಯಾದ ಪ್ರತಿಕ್ರಿಯೆಗಳು ಜಾಗತಿಕ ಭದ್ರತೆಗೆ ಅಪಾಯ ತರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read