ಫುಡ್ ಡೆಲಿವರಿ ಮಾಡಲು ಬಂದ ಜೊಮ್ಯಾಟೊ ಬಾಯ್‌ ಗೆ ಕಾದಿತ್ತು ಅಚ್ಚರಿ….!

2023 ರ ಹೊಸ ವರ್ಷವನ್ನು ಸ್ವಾಗತಿಸಲು ಜನರು ವಿವಿಧ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಪಂಚದಾದ್ಯಂತದ ಅನೇಕರು ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು. ಇವುಗಳ ನಡುವೆ ಹೃದಯಸ್ಪರ್ಶಿ ಹೊಸ ವರ್ಷದ ಪಾರ್ಟಿಯ ವಿಡಿಯೋ ಟ್ವಿಟರ್‌ನ ಗಮನ ಸೆಳೆದಿದೆ.

ಕಿಶನ್ ಶ್ರೀವತ್ಸ ಎನ್ನುವವರು ಟ್ವಿಟರ್‌ನಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ. ಜೊಮ್ಯಾಟೊ ಡೆಲಿವರಿ ಏಜೆಂಟ್‌ನೊಂದಿಗೆ ಸ್ನೇಹಿತರ ಗುಂಪು ಹೊಸ ವರ್ಷವನ್ನು ಆಚರಿಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.

ವಿಡಿಯೋದ ಹಿಂದಿನ ಕಥೆಯು ಖುಷಿ ತರುವಂಥದ್ದು. ರಾತ್ರಿ 11 ಗಂಟೆ ಸುಮಾರಿಗೆ ಕಿಶನ್ ತನ್ನ ಸ್ನೇಹಿತರೊಂದಿಗೆ ಜೊಮ್ಯಾಟೊದಲ್ಲಿ ಆಹಾರವನ್ನು ಆರ್ಡರ್ ಮಾಡುವುದರೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ.

ಕಾಕತಾಳೀಯವೆಂಬಂತೆ, ಗಡಿಯಾರ 12 ಹೊಡೆಯುವ ಹಂತದಲ್ಲಿದ್ದಾಗ ಡೆಲಿವರಿ ಏಜೆಂಟ್ ಸರಿಯಾಗಿ ಆಹಾರದೊಂದಿಗೆ ಬರುತ್ತಾರೆ. ಸ್ನೇಹಿತರು ತಮ್ಮ ಹೊಸ ವರ್ಷದ ಆಚರಣೆಯಲ್ಲಿ ಡೆಲಿವರಿ ಏಜೆಂಟ್‌ ಅನ್ನೂ ಸೇರಿಸಲು ನಿರ್ಧರಿಸಿ ಅವರನ್ನೂ ಸೇರಿಸಿಕೊಂಡಿದ್ದಾರೆ. ಅಲ್ಲದೆ ಕೇಕ್‌ ಕೂಡಾ ಕಟ್‌ ಮಾಡಿಸಿದ್ದಾರೆ. ಆಗ ಡೆಲವರಿ ಬಾಯ್‌ ಮೊಗದಲ್ಲಿ ಕಾಣುವ ಖುಷಿ ನೆಟ್ಟಿಗರ ಹೃದಯ ಗೆದ್ದಿದೆ.

https://twitter.com/SrivatsaKishan/status/1609272906047012866?ref_src=twsrc%5Etfw%7Ctwcamp%5Etweetembed%7Ctwterm%5E1609272906047012866%7Ctwgr%5E35bf80b2f987be20019cbb009bf2f71f3640cd11%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fzomato-delivery-agent-gets-a-million-dollar-surprise-on-new-year-from-customer-watch-heartwarming-video-2316698-2023-01-03

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read