ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ಹಾಗೂ ಅಲರ್ಜಿ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ. ವಿಟಮಿನ್ ಸಿ ಮತ್ತು ಡಿ ಹೊರತುಪಡಿಸಿ ಸತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ರೋಗನಿರೋಧಕ ವ್ಯವಸ್ಥೆಗೆ ಅಗತ್ಯವಾದ ಖನಿಜವಾಗಿದೆ.
ಸತು ಮಾನವ ದೇಹದಲ್ಲಿನ ಅನೇಕ ಜೈವಿಕ ಕಾರ್ಯಗಳೊಂದಿಗೆ ಸಂಬಂಧ ಹೊಂದಿದೆ. ದೇಹದಲ್ಲಿನ 300 ಕ್ಕೂ ಹೆಚ್ಚು ಕಿಣ್ವಗಳಿಗೆ ಸತುವು ಮುಖ್ಯವಾಗಿದೆ. ಇದು ಪ್ರೋಟೀನ್ ಸಂಶ್ಲೇಷಣೆ, ಗಾಯ ಗುಣಪಡಿಸುವುದು, ಡಿಎನ್‌ಎ ಸಂಶ್ಲೇಷಣೆ ಮತ್ತು ಕೋಶ ವಿಭಜನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ರುಚಿ ಮತ್ತು ವಾಸನೆಯ ಬಗ್ಗೆ ಸರಿಯಾದ ತಿಳುವಳಿಕೆಗೂ ಇದು ಅಗತ್ಯವಾಗಿರುತ್ತದೆ.
ಸತು, ಅಗತ್ಯವಾದ ಪೋಷಕಾಂಶವಾಗಿದ್ದರೂ, ಮಾನವ ದೇಹವು ತನ್ನದೇ ಆದ ಸತು ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ, ಇದನ್ನು ಆಹಾರದ ಮೂಲಕ ಪಡೆಯಬೇಕು. ಹೆಚ್ಚಿನ ಭಾರತೀಯರು ಸತುವಿನ ಕೊರತೆ ಎದುರಿಸುತ್ತಿದ್ದಾರೆ. ಸತು ಹೆಚ್ಚಿರುವ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಮಾಂಸ ಮತ್ತು ಕೋಳಿಗಳಲ್ಲಿ ಇದ್ರ ಪ್ರಮಾಣ ಹೆಚ್ಚಿದೆ. ಸಸ್ಯಹಾರಕ್ಕೆ ಹೋಲಿಸಿದ್ರೆ ಮಾಂಸಹಾರದಲ್ಲಿ ಸತು ಹೆಚ್ಚಿರುತ್ತದೆ. ಧಾನ್ಯದ ಬ್ರೆಡ್‌ಗಳು, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು ಇತ್ಯಾದಿಗಳಲ್ಲಿ ಸತು ಕಂಡು ಬರುತ್ತದೆ. ಕೆಲವು ಆಹಾರ ತಯಾರಿಕೆ ವಿಧಾನಗಳಿಂದಲೂ ಸತುವನ್ನು ಹೆಚ್ಚಿಸಿಕೊಳ್ಳಬಹುದು. ಬೀನ್ಸ್, ಧಾನ್ಯಗಳು ಮತ್ತು ಬೀಜಗಳನ್ನು ನೀರಿನಲ್ಲಿ ನೆನೆಸಿ ಬೇಯಿಸುವ ಮೊದಲು ಮೊಳಕೆ ಬರುವಂತೆ ನೋಡಿಕೊಳ್ಳಬೇಕು. ಮೊಳಕೆ ಬರುವ ಧಾನ್ಯಗಳಲ್ಲಿ ಸತು ಹೆಚ್ಚಿರುತ್ತದೆ.
ವಾಲ್ನಟ್ಸ್, ಬಾದಾಮಿ, ಗೋಡಂಬಿ, ಸೂರ್ಯಕಾಂತಿ, ಕುಂಬಳಕಾಯಿ, ಕಲ್ಲಂಗಡಿ ಬೀಜಗಳು, ಹಾಲು ಮತ್ತು ಡೈರಿ ಉತ್ಪನ್ನಗಳಲ್ಲಿ ಸ್ವಲ್ಪ ಪ್ರಮಾಣದ ಸತುವಿರುತ್ತದೆ. ತಾಜಾ ಹಣ್ಣುಗಳು ಮತ್ತು ತರಕಾರಿಗಳು ಸಾಮಾನ್ಯವಾಗಿ ಸತುವಿನ ಪ್ರಮಾಣ ಕಡಿಮೆಯಿರುತ್ತದೆ. ಆದಾಗ್ಯೂ ದಾಳಿಂಬೆ, ಪೇರಲ ಮತ್ತು ಅಣಬೆ, ಪಾಲಕ, ಕೋಸುಗಡ್ಡೆಗಿಂತ ತಾಜಾ ಹಣ್ಣಿನಲ್ಲಿ ಹೆಚ್ಚಿನ ಸತುವಿರುತ್ತದೆ. ಹೆಚ್ಚಿನ ಭಾರತೀಯರು ಸಸ್ಯಹಾರಿಗಳಾಗಿರುವುದ್ರಿಂದ ಸತು ಕೊರತೆ ವ್ಯಾಪಕವಾಗಿದೆ.