
ಈ ಮಾತಿಗೆ ಉದಾಹರಣೆ ಎಂಬಂತಹ ಘಟನೆಯೊಂದು ಮುಂಬೈ ಲೋಕಲ್ ರೈಲಿನಲ್ಲಿ ಸಂಭವಿಸಿದೆ. ಕುರ್ಲಾದಿಂದ ಮನ್ಖುರ್ದ್ಗೆ ಸಂಚರಿಸುತ್ತಿದ್ದ ಮುಂಬೈ ಲೋಕಲ್ ಟ್ರೇನ್ನಲ್ಲಿ ಯುವಕನೊಬ್ಬ ಫುಟ್ಬೋರ್ಡ್ನ ಕೆಳಗೆ ಇಳಿದು ತೇಲಾಡಿದ್ದಾನೆ. ಇದನ್ನು ಎಕ್ಸ್ನಲ್ಲಿ ಶೇರ್ ಮಾಡಲಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ರೈಲ್ವೆ ಸಂರಕ್ಷಣಾ ಪಡೆಯು ಪ್ರತಿಕ್ರಿಯೆ ನೀಡಿದ್ದು. ಇಂತಹ ಹುಚ್ಚು ಸಾಹಸ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ರೈಲಿನಲ್ಲಿ ಕುಳಿತುಕೊಳ್ಳಲು ಸೀಟುಗಳು ಖಾಲಿ ಇದ್ದರೂ ಸಹ ಯುವಕನೊಬ್ಬ ರೈಲಿನ ಮೆಟ್ಟಿಲುಗಳ ಮೇಲೆ ನಿಂತು ಈ ರೀತಿ ಹುಚ್ಚಾಟ ತೋರಿದ್ದಾನೆ. ಫುಟ್ಬೋರ್ಡ್ನಲ್ಲಿ ಕೂಡ ಜನರು ಇಲ್ಲದೇ ಇರೋದನ್ನು ಕಾಣಬಹುದಾಗಿದೆ. ಸಂಪೂರ್ಣ ಖಾಲಿ ಇದ್ದ ರೈಲಿನಲ್ಲಿ ಪ್ರಯಾಣಿಸಲು ಅನೇಕ ಸುರಕ್ಷಿತ ಸ್ಥಳಗಳು ಇದ್ದರೂ ಸಹ ಈ ಯುವಕ ಅವು ಯಾವುದನ್ನೂ ಆಯ್ಕೆ ಮಾಡಿಕೊಳ್ಳದೆ ರೈಲಿನ ಮೆಟ್ಟಿಲ ಮೇಲೆ ಅಪಾಯಕಾರಿ ಸ್ಟಂಟ್ಸ್ ಮಾಡಿದ್ದಾನೆ.
ರೈಲು ಮೆಟ್ಟಿಲಗಳ ಮೇಲೆ ನಿಂತಿದ್ದ ಯುವಕ ಆಧಾರಕ್ಕೆಂದು ರೈಲಿನ ರಾಡ್ ಹಿಡಿದುಕೊಂಡಿದ್ದನ್ನು ಕಾಣಬಹುದಾಗಿದೆ. ತನ್ನ ಸ್ಟಾಪ್ ಬರುತ್ತಿದ್ದಂತೆಯೇ ರೈಲು ನಿಲ್ಲಿಸುವ ಮುನ್ನವೇ ಯುವಕ ರೈಲಿನಿಂದ ಜಿಗಿದಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಯುವಕನ ದುರ್ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.