ಇನ್ ಸ್ಟಾಗ್ರಾಂ ನಲ್ಲಿ ಫೋಟೋಗೆ ಲೈಕ್ ಕೊಟ್ಟಿದ್ದಕ್ಕೆ ಭಾವಿ ಪತ್ನಿಯ ಜಗಳ: ಯುವಕ ಆತ್ಮಹತ್ಯೆ

ಮಂಗಳೂರು: ಇನ್ ಸ್ಟಾ ಗ್ರಾಂ ಫೋಟೋಗೆ ಲೈಕ್ ಕೊಟ್ಟಿದ್ದಕ್ಕೆ ಗೆಳತಿ ತರಾಟೆಗೆ ತೆಗೆದುಕೊಂಡಿದ್ದು, ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೂಂಜಾಲಕಟ್ಟೆಯಲ್ಲಿ ನಡೆದಿದೆ.

25 ವರ್ಷದ ಚೇತನ್ ಆತ್ಮಹತ್ಯೆಗೆ ಶರಣದಾ ಯುವಕ. ಕುಂದಾಪುರ ಮೂಲದ ಯುವತಿ ಇನ್ ಸ್ಟಾಗ್ರಾಂ ನಲ್ಲಿ ಪರಿಚಯವಾಗಿದ್ದಳು. ಇಬ್ಬರ ನಡುವೆ ಸ್ನೇಹ ಪ್ರೀತಿಗೆ ತಿರುಗಿತ್ತು. 8 ತಿಂಗಳ ಹಿಂದಷ್ಟೇ ಇಬ್ಬರ ನಡುವೆ ನಿಶ್ಚಿತಾರ್ಹವೂ ಆಗಿತ್ತು. ಜ.21ರಂದು ಚೇತನ್ ತನ್ನ ಪರಿಚಯದ ಬೇರೊಂದು ಯುವತಿಯ ಫೋಟೋಗೆ ಇನ್ ಸ್ಟಾಗ್ರಾಂ ನಲ್ಲಿ ಲೈಕ್ ಕೊಟ್ಟಿದ್ದ. ಇದರಿಂದ ಬೇಸರಗೊಂಡ ಭಾವಿ ಪತ್ನಿ, ನೇರವಾಗಿ ಚೇತನ್ ಮನೆಗೆ ಬಂದು ಪ್ರಶ್ನೆ ಮಾಡಿದ್ದಾಳೆ.

ಬೇರೆ ಯುವತಿಯ ಫೋಟೋಗೆ ಲೈಕ್ ಕೊಟ್ಟಿದ್ದಕ್ಕೆ ಜಗಳವಾಡಿದ್ದಾಳೆ. ನೊಂದ ಯುವಕ ಯುವತಿ ಮನೆಯಲ್ಲಿದ್ದಾಗಲೇ ಒಳಗೆ ಹೋದವನು ತಾಯಿಗೆ ಕರೆ ಮಾಡಿದ್ದಾನೆ. ಬಳಿಕ ಹೊರಗೆ ಬಂದಿಲ್ಲ. ತಾಯಿ ಮನೆಗೆ ಬಂದು ನೋಡುವಷ್ಟರಲ್ಲಿ ಮನೆಯ ಒಳಗೆ ಚೇತನ್ ನೇಣಿಗೆ ಕೊರಳೊಡ್ಡಿದ್ದಾನೆ.

ಪುಂಜಾಲಕಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read