PVR , INOX ನಲ್ಲೂ ನೀವು ರಾಮಮಂದಿರ ಉದ್ಘಾಟನೆಯ ‘LIVE’ ವೀಕ್ಷಿಸಬಹುದು, ಟಿಕೆಟ್ ದರ ಎಷ್ಟು ತಿಳಿಯಿರಿ

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ್ ಲಾಲಾ ಪ್ರತಿಷ್ಠಾಪನೆ ನಡೆಯಲಿದ್ದು, ದೇಶಾದ್ಯಂತ ದೊಡ್ಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ್ ಲಾಲಾ ಪ್ರತಿಷ್ಠಾಪನೆ ನಡೆಯಲಿದ್ದು, ಎಲ್ಲರೂ ಈ ದಿನಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಸಾಮಾನ್ಯ ಜನರಿಂದ ಹಿಡಿದು ದೊಡ್ಡ ತಾರೆಯವರೆಗೆ ಈ ವಿಶೇಷ ಕ್ಷಣಕ್ಕಾಗಿ ತುಂಬಾ ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲ, ಈ ದಿನವನ್ನು ಇನ್ನಷ್ಟು ವಿಶೇಷವಾಗಿಸಲು ಅದರ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಪ್ರತಿಯೊಬ್ಬರೂ ಈ ಭವ್ಯ ನೋಟವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಆದರೆ ಇದನ್ನು ನೇರವಾಗಿ ಕಣ್ತುಂಬಿಕೊಳ್ಳಲು ಎಲ್ಲರಿಗೂ ಸಾಧ್ಯವಾಗಲ್ಲ. ಆದ್ದರಿಂದ ರಾಮ ದೇವಾಲಯದ ಪ್ರತಿಷ್ಠಾಪನೆಯನ್ನು ದೊಡ್ಡ ಪರದೆಯ ಮೇಲೆ ನೀವು ನೋಡಬಹುದು. ಜನವರಿ 22 ರಂದು ಎಲ್ಲರೂ ರಾಮಲಲ್ಲಾನನ್ನು ಪಿವಿಆರ್ ಮತ್ತು ಐನಾಕ್ಸ್ ನಲ್ಲಿ ನೋಡಬಹುದು. ಹೌದು, ಚಿತ್ರಮಂದಿರಗಳು ಇದಕ್ಕೆ ಅವಕಾಶ ನೀಡಿವೆ. ಈ ಕಾರಣದಿಂದಾಗಿ ಈಗ ಈ ಭವ್ಯ ಕಾರ್ಯಕ್ರಮದ ಭಾಗವಾಗಲು ಸಾಧ್ಯವಾಗದವರು ಚಿತ್ರಮಂದಿರಗಳಿಗೆ ಹೋಗಿ ದೊಡ್ಡ ಪರದೆಯಲ್ಲಿ ವೀಕ್ಷಿಸಬಹುದು.

ಪಿವಿಆರ್ ಮತ್ತು ಐನಾಕ್ಸ್ ದೇಶದ 70 ಪ್ರಮುಖ ನಗರಗಳಲ್ಲಿ 170 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿವೆ. ಈ ಕಾರ್ಯಕ್ರಮವನ್ನು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನೋಡಬಹುದು. ಇದಕ್ಕಾಗಿ ಟಿಕೆಟ್ ದರವನ್ನು 100 ರೂ.ಗೆ ನಿಗದಿಪಡಿಸಲಾಗಿದೆ. ಇದು ಕೇವಲ ಚಲನಚಿತ್ರ ಟಿಕೆಟ್ ಬೆಲೆ ಮಾತ್ರವಲ್ಲ, ಇದು ನೀರು ಮತ್ತು ಪಾಪ್ ಕಾರ್ನ್ ಕಾಂಬೋವನ್ನು ಸಹ ಒಳಗೊಂಡಿದೆ. ಇದಕ್ಕೂ ಮುನ್ನ ಪಿವಿಆರ್ ಕ್ರಿಕೆಟ್ ವಿಶ್ವಕಪ್ ನ್ನು ನೇರ ಪ್ರಸಾರ ಮಾಡಿತ್ತು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read