ಯಮಹಾ ಮೋಟಾರ್‌ಸೈಕಲ್‌ಗಳು ಭಾರತೀಯ ಮಾರುಕಟ್ಟೆಗೆ ಬರಲಿವೆ ಎಂದು ಘೋಷಿಸಿದಾಗಿನಿಂದ ಯಮಹಾ R3 ಮತ್ತು ಎಂಟಿ-03 ಸಾಕಷ್ಟು ಪ್ರಚಾರದಲ್ಲಿವೆ. ನಾಳೆ (ಡಿ.15 ರಂದು) ಈ ಅತ್ಯಾಕರ್ಷಕ ನೂತನ ಯಮಹಾ R3 ಮತ್ತು ಎಂಟಿ-03 ಬೈಕ್ ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕಾಗಿ ಗ್ರಾಹಕರು ಕಾಯುತ್ತಿದ್ದಾರೆ. ಯಮಹಾ R3 ಈಗಾಗಲೇ ಮಾರಾಟದಲ್ಲಿತ್ತು, ಆದರೆ ಇಂಧನ ಹೊರಸೂಸುವಿಕೆಯ ಮಾನದಂಡಗಳನ್ನು ಬದಲಾಯಿಸಿದಾಗ ಅದರ ಮಾರಾಟ ನಿಲ್ಲಿಸಲಾಯಿತು. ಆದರೆ ಎಂಟಿ-03 ಭಾರತೀಯ ಮಾರುಕಟ್ಟೆ ತಲುಪುತ್ತಿರುವುದು ಇದೇ ಮೊದಲು.
ಎರಡೂ ಮೋಟಾರ್‌ಸೈಕಲ್‌ಗಳ ಎಂಜಿನ್, ಚಾಸಿಸ್, ಟ್ರಾನ್ಸ್ ಮಿಷನ್ ಒಂದೇ ಆಗಿರುತ್ತವೆ. ಮುಂಭಾಗ ಅಪ್-ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಮೂಲಕ ಕಾರ್ಯ ನಿರ್ವಹಿಸಲಾಗುತ್ತದೆ. ಬ್ರೇಕಿಂಗ್ ಕರ್ತವ್ಯಗಳನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಮೂಲಕ ನಿರ್ವಹಿಸಲಾಗುತ್ತದೆ. ಡುಯಲ್ ಚಾನಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿವೆ. ಜೊತೆಗೆ 17 – ಇಂಚಿನ ಅಲಾಯ್ ವೀಲ್ಸ್ ಒಳಗೊಂಡಿದೆ.
ಹೊಸ ಯಮಹಾ ಆರ್3 ಮತ್ತು ಎಂಟಿ-03 ಬೈಕ್‌ಗಳು, 321 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ಪಡೆದಿದ್ದು, 41.4 bhp ಗರಿಷ್ಠ ಪವರ್ ಹಾಗೂ 29.6 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಸ್ಲಿಪ್ & ಅಸಿಸ್ಟ್ ಕ್ಲಚ್ ಜೊತೆಗೆ 6 – ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
LED ಲೈಟಿಂಗ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ನೂತನ ಬೈಕ್ ಗಳ ಪ್ರತಿಸ್ಪರ್ಧಿಗಳೆಂದರೆ R3 ಕವಾಸಕಿ ನಿಂಜಾ 300, KTM RC 390 ಮತ್ತು ಎಪ್ರಿಲಿಯಾ RS 457 . ಬಿಎಂಡ್ಯೂ್ಯ G 310 R.
ಯಮಹಾ R3 ಮತ್ತು MT-03 ಅನ್ನು ಡಿಸೆಂಬರ್ 15 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಯಮಹಾ R3 ಸುಮಾರು ₹4 ಲಕ್ಷದ ಎಕ್ಸ್ ಶೋರೂಂ ಬೆಲೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಎಂಟಿ-03 ಬೆಲೆ ಸ್ವಲ್ಪ ಕಡಿಮೆಯಾಗಿ ₹3.8 ಲಕ್ಷ ಎಕ್ಸ್ ಶೋ ರೂಂ ಆಗಲಿದೆ.