1997ರ ಬೇಸಿಗೆಯ ಕೊನೆಯಲ್ಲಿ ಬ್ರಿಟನ್ ರಾಜಕುಮಾರಿ ಡಯಾನಾ ಮತ್ತು ಆಕೆಯ ಪ್ರೇಮಿ ಡೋಡಿ ಫಯೆದ್ ಸಾಯುವ ಕೆಲವು ದಿನಗಳ ಮುನ್ನ, 65 ಅಡಿ ಸೂಪರ್ಯಾಚ್ಟ್ ಕುಜೋದಲ್ಲಿ ಕೆಲವು ವಾರಗಳನ್ನು ಕಳೆದಿದ್ದರು. ಇದೀಗ ದಶಕಗಳ ನಂತರ, ಈ ದೋಣಿ ಫ್ರಾನ್ಸ್ ಕರಾವಳಿಯಲ್ಲಿ ಮುಳುಗಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ನೌಕೆಯಲ್ಲಿದ್ದ ಏಳು ಜನರನ್ನು ರಕ್ಷಿಸಲಾಗಿದೆ. ವಿಹಾರ ನೌಕೆಯು ಸಿರಿವಂತ ಪ್ರಯಾಣಿಕರೇ ಇದರಲ್ಲಿ ವಿಹರಿಸುವ ಕಾರಣದಿಂದಾಗಿ ವಿಶ್ವದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ, ದುಃಖಕರ ವಿಷಯವೆಂದರೆ, ಈ ವಿಹಾರ ನೌಕೆಯು ಈಗ 7,000 ಅಡಿಗಳಷ್ಟು ಸಮುದ್ರದ ಅಡಿಯಲ್ಲಿ ಮುಳುಗಿದೆ.
ದೋಣಿ ಮುಳುಗುವ ಅಪಾಯ ತಿಳಿದ ವಿಹಾರ ನೌಕೆಯಲ್ಲಿದ್ದ ಪ್ರಯಾಣಿಕರು, ಜುಲೈ 29 ರಂದು ಸ್ಥಳೀಯ ಸಮಯ 12:30 ರ ಸುಮಾರಿಗೆ ಕರೆ ಮಾಡಿದರು. ಒಂದು ಗಂಟೆಯ ನಂತರ, ಒಂದು ಪಾರುಗಾಣಿಕಾ ದೋಣಿ ಆಗಮಿಸಿ ಪ್ರಯಾಣಿಕರನ್ನು ರಕ್ಷಿಸಿತ್ತು. ಈ ವೇಳೆ ವಿಹಾರ ನೌಕೆ ಭಾಗಶಃ ಮುಳುಗಿತ್ತು.
ಅಪಘಾತದ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ವರದಿಯೊಂದರ ಪ್ರಕಾರ, ಹಡಗು ಮಧ್ಯಭಾಗದಲ್ಲಿ ತೇಲುತ್ತಿದ್ದಾಗ ಅಪರಿಚಿತ ವಸ್ತುವಿಗೆ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ಹೇಳಿವೆ.
ಅಂದಹಾಗೆ, ವಿಹಾರ ನೌಕೆಯನ್ನು ಮೂಲತಃ 1972 ರಲ್ಲಿ ಪ್ರಾರಂಭಿಸಲಾಯಿತು. ಅದರ ಮೊದಲ ಮಾಲೀಕ ಜಾನ್ ವಾನ್ ನ್ಯೂಮನ್ ಅವರಿಂದ ನಿಯೋಜಿಸಲ್ಪಟ್ಟಿತು.
ಬ್ರಿಟನ್ ರಾಜಕುಮಾರಿ ಡಯಾನಾ ಮತ್ತು ದೋಡಿ ಫಾಯೆದ್ ಅವರ ಮರಣದ ನಂತರ, ವಿಹಾರ ನೌಕೆಯು 1999 ರಲ್ಲಿ ಶಿಥಿಲಗೊಂಡಿತು ಮತ್ತು ಸ್ಥಗಿತಗೊಂಡಿತ್ತು. ಹಲವು ವರ್ಷಗಳ ನಂತರ, ಫಾಯೆದ್ ಅವರ ಸೋದರ ಸಂಬಂಧಿ ಮೂಡಿ ಅಲ್-ಫಯೆದ್ ಅದನ್ನು ಖರೀದಿಸಿ, ಮತ್ತೆ ಸಕ್ರಿಯಗೊಳಿಸಿದ್ದರು.