ಜಗತ್ತಿನ ಅತ್ಯಂತ ದುಬಾರಿ ಸ್ಯಾಂಡ್ವಿಚ್ ಎಂದು ಗಿನ್ನೆಸ್ ದಾಖಲೆ ಪುಸ್ತಕಗಳನ್ನು ಸೇರಿದ $214 ಮೌಲ್ಯದ ಸ್ಯಾಂಡ್ವಿಚ್ ಒಂದನ್ನು ನ್ಯೂಯಾರ್ಕ್ನ ರೆಸ್ಟೋರೆಂಟ್ ರಾಷ್ಟ್ರೀಯ ಗ್ರಿಲ್ಡ್ ಚೀಸ್ ದಿನದಂದು (ಏಪ್ರಿಲ್ 12) ಮತ್ತೆ ಪರಿಚಯಿಸಿದೆ.
ತನ್ನ ದುಬಾರಿ ಖಾದ್ಯಗಳಿಗೆ ಹೆಸರಾದ ನ್ಯೂಯಾರ್ಕ್ನ ಸೆರೆಂಡಿಪಿಟಿ 3 ಹೆಸರಿನ ರೆಸ್ಟೋರೆಂಟ್ ಒಂದರಲ್ಲಿ ಈ ಗ್ರಿಲ್ಡ್ ಚೀಸ್ ಕೆಲ ಕಾಲದ ಮಟ್ಟಿಗೆ ಮರಳಲಿದೆ.
ಸಾಮಾಜಿಕ ಜಾಲತಾಣದಲ್ಲಿರುವ ತನ್ನ ಖಾತೆಯಲ್ಲಿ ಈ ಸುದ್ದಿಯ ಘೋಷಣೆ ಮಾಡಿದ ಸೆರೆಂಡಿಪಿಟಿ 3, “ಗಿನ್ನೆಸ್ ವಿಶ್ವ ದಾಖಲೆ ವಿಜೇತ ಖಾದ್ಯವೊಂದನ್ನು ಸೀಮಿತ ಅವಧಿಯ ಮಟ್ಟಿಗೆ ಮರು ಪರಿಚಯಿಸುತ್ತಿದ್ದೇವೆ. ರಾಷ್ಟ್ರೀಯ ಗ್ರಿಲ್ಡ್ ಚೀಸ್ ದಿನದಂದು, ನ್ಯೂಯಾರ್ಕ್ನ ಎಸ್3, ಜಗತ್ತಿನ ಅತ್ಯಂತ ದುಬಾರಿಯದ್ದು ಎಂದು ಪರಿಗಣಿತವಾದ, $214 ಮೌಲ್ಯದ ’ದಿ ಕ್ವಿಂಟೆಸೆನ್ಶಿಯಲ್ ಗ್ರಿಲ್ಡ್ ಸ್ಯಾಂಡ್ವಿಚ್’ಅನ್ನು ಆಫರ್ ಮಾಡಲಿದೆ,” ಎಂದು ಪೋಸ್ಟ್ ಮಾಡಿದೆ.