ಇಂದು ‘ವಿಶ್ವ ಸೈಕಲ್ ದಿನ’ ವಾಗಿದೆ. ಈ ಸಂದರ್ಭದಲ್ಲಿ ಸೈಕಲ್ ಹೊಡೆಯುವುದರಿಂದ ಆಗುವ ಆರೋಗ್ಯ ಲಾಭ ಸೇರಿದಂತೆ ಇತರೆ ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ.
ಸೈಕಲ್ ಚಾಲನೆ ಮಾಡುವುದರಿಂದ ಪರಿಸರ ಮಾಲಿನ್ಯ ತಪ್ಪುವುದಲ್ಲದೆ ಇಂಧನಕ್ಕಾಗಿ ನಾವು ವ್ಮಯಿಸುವ ಹಣ ಸಹ ಉಳಿತಾಯವಾಗುತ್ತದೆ. ಅಲ್ಲದೆ ಸೈಕಲ್ ಚಾಲನೆಯಿಂದ ಅಪರಿಮಿತ ಆರೋಗ್ಯ ಲಾಭ ಸಿಗುತ್ತದೆ.
ವಿಶ್ವ ಸೈಕಲ್ ದಿನ ಆಚರಿಸುವ ಆಲೋಚನೆಯನ್ನು ಪ್ರಪ್ರಥಮವಾಗಿ ಅಮೆರಿಕಾದಲ್ಲಿ ನೆಲೆಸಿದ್ದ ಪೊಲೀಶ್ ಮೂಲದ ಸಾಮಾಜಿಕ ವಿಜ್ಞಾನಿ Leszek Sibilski ಹೊಂದಿದ್ದು, ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯ ಮಂದಿಟ್ಟಿದ್ದರು. ಇದಕ್ಕೆ 56 ದೇಶಗಳ ಬೆಂಬಲವೂ ಸಿಕ್ಕಿತ್ತು. ಅಂತಿಮವಾಗಿ 2018 ರಂದು ಪ್ರತಿ ವರ್ಷ ಜೂನ್ 3ರಂದು ‘ವಿಶ್ವ ಸೈಕಲ್ ದಿನ’ ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು.