ವಿಶ್ವದ ಬಹುತೇಕ ದೇಶಗಳಿಗೆ ಟ್ಯಾಕ್ಸ್ ನಿಂದ ಬರುವ ಆದಾಯವೇ ದೊಡ್ಡ ಆದಾಯವಾಗಿರುತ್ತದೆ. ಭಾರತ ಸೇರಿದಂತೆ ಅನೇಕ ದೇಶಗಳು ನಾನಾ ವಿಷ್ಯಕ್ಕೆ ಜನರಿಂದ ಟ್ಯಾಕ್ಸ್ ವಸೂಲಿ ಮಾಡುತ್ವೆ. ವಿಶ್ವದ ಕೆಲ ದೇಶಗಳು ನಾಗರಿಕರಿಂದ ತೆರಿಗೆ ವಸೂಲಿ ಮಾಡೋದಿಲ್ಲ. ಜನರು ಗಳಿಸಿದ ಹಣಕ್ಕೆ ತೆರಿಗೆ ಪಾವತಿ ಮಾಡ್ಬೇಕಾಗಿಲ್ಲ. ಅವರು ಗಳಿಸಿದ ಹಣವನ್ನು ಆರಾಮವಾಗಿ ಉಳಿತಾಯ ಮಾಡಬಹುದು. ತೆರಿಗೆ ವಿಧಿಸದ ದೇಶಗಳ ವಿವರ ಇಲ್ಲಿದೆ.
ಬಹಮಾಸ್ : ಇದು ದ್ವೀಪ ದೇಶವಾಗಿದೆ. ಪ್ರವಾಸಿಗರ ಸ್ವರ್ಗ ಎಂದೇ ಇದನ್ನು ಕರೆಯಲಾಗುತ್ತದೆ. ಈ ದೇಶದ ಜನರು ಯಾವುದೇ ತೆರಿಗೆ ಪಾವತಿ ಮಾಡ್ಬೇಕಾಗಿಲ್ಲ.
ಯುಎಇ : ಶ್ರೀಮಂತ ದೇಶಗಳಲ್ಲಿ ಒಂದಾಗಿರುವ, ತೈಲ ಮಾರಾಟದಲ್ಲಿ ಮುಂದಿರುವ ಈ ದೇಶದ ಜನರು ಕೂಡ ತಮ್ಮ ಆದಾಯಕ್ಕೆ ತೆರಿಗೆ ಪಾವತಿ ಮಾಡ್ಬೇಕಾಗಿಲ್ಲ.
ಬಹ್ರೇನ್ : ಮಧ್ಯ ಪೂರ್ವ ರಾಷ್ಟ್ರವಾದ ಬಹ್ರೇನ್ ನಲ್ಲಿ ಕೂಡ ತೆರಿಗೆ ನಿಯಮವಿಲ್ಲ. ಇಲ್ಲಿ ಜನರು ಎಷ್ಟೇ ಹಣ ಗಳಿಸಿದ್ರೂ ತೆರಿಗೆ ಹೆಸರಿನಲ್ಲಿ ಸರ್ಕಾರಕ್ಕೆ ಹಣ ಪಾವತಿ ಮಾಡ್ಬೇಕಾಗಿಲ್ಲ.
ಕುವೈತ್ : ತೈಲ ಉತ್ಪಾದನೆಯಲ್ಲಿ ಮುಂದಿರುವ ದೇಶಗಳಲ್ಲಿ ಇದೂ ಒಂದು. ಇಲ್ಲಿ ವಾಸಿಸುವ ನಾಗರಿಕರು ಕೂಡ ತೆರಿಗೆ ಪಾವತಿ ಮಾಡಬೇಕಾಗಿಲ್ಲ.
ಒಮನ್ : ಆಯಿಲ್ ಮತ್ತು ಗ್ಯಾಸ್ ಉತ್ಪಾದನೆಯಲ್ಲಿ ದೊಡ್ಡ ಹೆಸರು ಪಡೆದಿರುವ ಒಮನ್ ಕೂಡ ಟ್ಯಾಕ್ಸ್ ಫ್ರೀ ದೇಶವಾಗಿದೆ.
ಮಾಲ್ಡೀವ್ಸ್ : ಭಾರತೀಯರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಸಮುದ್ರಗಳಿಂದ ಕೂಡಿರುವ ಈ ದೇಶದಲ್ಲೂ ತೆರಿಗೆಯಿಲ್ಲ.