alex Certify ಸುರಂಗದಲ್ಲಿ 16 ದಿನಗಳಿಂದ ಸೂರ್ಯನನ್ನೇ ನೋಡದ ಕಾರ್ಮಿಕರಿಗೆ ಬರಬಹುದು ಇಂಥಾ ಗಂಭೀರ ಸೋಂಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಂಗದಲ್ಲಿ 16 ದಿನಗಳಿಂದ ಸೂರ್ಯನನ್ನೇ ನೋಡದ ಕಾರ್ಮಿಕರಿಗೆ ಬರಬಹುದು ಇಂಥಾ ಗಂಭೀರ ಸೋಂಕು….!

ಉತ್ತರಾಖಂಡದ ಸುರಂಗ ಅಪಘಾತ ಕಳೆದ ಹದಿನೈದು ದಿನಗಳಿಂದ ಸುದ್ದಿಯಲ್ಲಿದೆ. 16 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರನ್ನು ಹೊರತರಲಾಗಿದೆ. ಇಡೀ ದೇಶದ ಹಾರೈಕೆಯಂತೆ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಸುರಂಗದಿಂದ ಹೊರತೆಗೆದ ಕೂಡಲೇ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಗ್ಯ ತಪಾಸಣೆ ನಂತರವೇ ಕಾರ್ಮಿಕರನ್ನು ಬಿಡುಗಡೆ ಮಾಡಲಾಗುವುದು. ತಜ್ಞರ ಪ್ರಕಾರ ಕಾರ್ಮಿಕರು 16 ದಿನಗಳ ಕಾಲ ಕತ್ತಲ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿದ್ದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಎದುರಿಸಬೇಕಾಗಬಹುದು.

16 ದಿನ ಕತ್ತಲಲ್ಲೇ ಇದ್ದು, ನಂತರ ಇದ್ದಕ್ಕಿದ್ದಂತೆ ಬೆಳಕಿಗೆ ಒಡ್ಡಿಕೊಂಡಾಗ ಕಾರ್ಮಿಕರಿಗೆ ದೃಷ್ಟಿ ಸಮಸ್ಯೆ ಎದುರಾಗಬಹುದು. ಸುರಂಗದಲ್ಲಿ ಆಮ್ಲಜನಕದ ಕೊರತೆ ಇರುತ್ತದೆ. ಹಾಗಾಗಿ ಕಾರ್ಮಿಕರಿಗೆ ಆಕ್ಸಿಜನ್ ಪೂರೈಸಲಾಗಿದೆ. ಸರಿಯಾದ ಪ್ರಮಾಣದ ಆಮ್ಲಜನಕವನ್ನು ಪಡೆಯದ ಕಾರಣ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ. ಶ್ವಾಸಕೋಶದ ಸೋಂಕು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. ಕಾರ್ಮಿಕರ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗುವ ಅಪಾಯವೂ ಇದೆ.

ಸರಿಯಾದ ಆಹಾರದ ಕೊರತೆ ಮತ್ತು ಕಡಿಮೆ ನೀರಿನ ಸೇವನೆಯಿಂದಾಗಿ ಡಿಹೈಡ್ರೇಶನ್‌ ಉಂಟಾಗಿರುವ ಸಾಧ್ಯತೆಗಳಿವೆ. ಇದಲ್ಲದೇ 16 ದಿನಗಳ ಕಾಲ 41 ಮಂದಿ ಸುರಂಗದಲ್ಲಿ ಒಟ್ಟಿಗೆ ಇದ್ದರು. ಇದರಿಂದಾಗಿ ಬ್ಯಾಕ್ಟೀರಿಯಾದ ಸೋಂಕಿನ ಅಪಾಯವೂ ಇದೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನಿಂದ ಚರ್ಮ ರೋಗಗಳ ಅಪಾಯವು ಹೆಚ್ಚಾಗುತ್ತದೆ.

ಇದಲ್ಲದೆ ಸುರಂಗದಲ್ಲಿ ದೀರ್ಘಕಾಲ ಸಿಲುಕಿಕೊಂಡಿರುವುದು ಕಾರ್ಮಿಕರ ಮನಸ್ಥಿತಿಯ ಮೇಲೂ ಪರಿಣಾಮ ಬೀರಬಹುದು. ಸುರಂಗದಲ್ಲಿ ತಂಗಿದ್ದಾಗ ಅವರ ಮನಸ್ಸಿನಲ್ಲಿ ಹಲವು ರೀತಿಯ ಪ್ರಶ್ನೆಗಳು ಹುಟ್ಟಿರುತ್ತವೆ. ಇದರಿಂದಾಗಿ ಆತಂಕ ಮತ್ತು ಖಿನ್ನತೆಯ ಅಪಾಯವೂ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರು ಮನೋವೈದ್ಯರ ಬಳಿ ಸಮಾಲೋಚನೆ ಪಡೆಯುವುದು ಅಗತ್ಯವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...