ಮನೆಯ ಎಲ್ಲಾ ಕೆಲಸಗಳನ್ನು ಮಾಡಿ ಕೊಬ್ಬು ಕರಗಿಸಿ ಕೊಳ್ಳುತ್ತೇನೆ ಎಂದುಕೊಂಡಿದ್ದರೆ ಅದು ತಪ್ಪು. ಕೆಲವು ಕೆಲಸಗಳು ಮಾತ್ರ ನಿಮ್ಮ ಕ್ಯಾಲರಿಯನ್ನು ಕಡಿಮೆ ಮಾಡುತ್ತದೆ ಎಂಬುದು ನಿಮಗೆ ತಿಳಿದಿರಲಿ.
ಮನೆಯಲ್ಲಿ ನೆಲ ಒರೆಸುವ ಮೂಲಕ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಬಗ್ಗಿ ನೆಲ ಒರೆಸುವುದರಿಂದ ಹೆಚ್ಚುವರಿ ಕ್ಯಾಲರಿ ಸುಡುತ್ತದೆ. ಇದು ಏರೋಬಿಕ್ಸ್ ವ್ಯಾಯಾಮ ದಷ್ಟೇ ಪ್ರಯೋಜನಕಾರಿ. ಕೋಲಿನಿಂದ ನೆಲ ಒರೆಸಿದರೆ ಹೆಚ್ಚಿನ ಪ್ರಯೋಜನ ಸಿಗದು.
ಇನ್ನು ಮನೆಯ ಮೂಲೆ ಮೂಲೆಯಲ್ಲಿ ಕಾಣಿಸಿಕೊಂಡಿರುವ ಧೂಳನ್ನು ತೆಗೆಯುವುದರಿಂದ ಕೊಬ್ಬು ಕರಗುತ್ತದೆ. ಅದರ ಹೊರತಾಗಿ ಕೈಯಿಂದಲೇ ಬಟ್ಟೆ ಒಗೆಯುವುದರಿಂದ ಕೈಕಾಲು ಹಾಗೂ ಬೆನ್ನುಗಳ ಸ್ನಾಯುಗಳಿಗೆ ವ್ಯಾಯಾಮ ದೊರೆಯುತ್ತದೆ. ಹೊಟ್ಟೆಯ ಭಾಗಕ್ಕೆ ವ್ಯಾಯಾಮ ದೊರೆಯುತ್ತದೆ. ಹಾಗಾಗಿ ಬಟ್ಟೆ ತೊಳೆಯುವುದು ದೇಹದ ಎಲ್ಲಾ ಭಾಗಗಳಿಗೂ ವ್ಯಾಯಾಮ ನೀಡಿದಂತೆ ಆಗುತ್ತದೆ.