ನೆನ್ನೆ ನಡೆದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಮಹಿಳಾ ಭಾರತ ತಂಡ 9 ವಿಕೆಟ್ ಗಳಿಂದ ಜಯಭೇರಿಯಾಗುವ ಮೂಲಕ ಶುಭಾರಂಭ ಮಾಡಿದೆ. ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದಾರೆ. ಈ ಮೂಲಕ ಟಿ ಟ್ವೆಂಟಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಶಫಾಲಿವರ್ಮ ಹಾಗೂ ಸ್ಮೃತಿ ಮಂದನ ಅರ್ಧಶತಕ ಸಿಡಿಸಿದರೆ ಯುವ ಆಟಗಾರ್ತಿ ಟೆಟಾಸ್ ಸಾಧು ನಾಲ್ಕು ವಿಕೆಟ್ ಪಡೆದುಕೊಂಡಿದ್ದಾರೆ.
ನಾಳೆ ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯ ನಡೆಯಲಿದ್ದು, ಮಹಿಳಾ ಭಾರತ ತಂಡ ಈ ಪಂದ್ಯವನ್ನು ಗೆದ್ದು ಸರಣಿ ಕೈ ವಶಪಡಿಸಿಕೊಳ್ಳುವ ನೀರಿಕ್ಷೆಯಲ್ಲಿದೆ. ಈ ಪಂದ್ಯ 2 ತಂಡಕ್ಕೂ ತುಂಬಾ ಮುಖ್ಯವಾಗಿದ್ದು, ಅಪಾರ ಸಂಖ್ಯೆಯ ಪ್ರೇಕ್ಷಕರು ಸೇರಲಿದ್ದಾರೆ.