ನಿನ್ನೆ ನಡೆದ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿಯರ್ಸ್ ತಂಡದ ಎದುರು 23 ರನ್ ಗಳಿಂದ ಜಯಭೇರಿ ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ವುಮೆನ್ಸ್ ಪ್ರೀಮಿಯರ್ ಲೀಗ್ನ ಪಂದ್ಯಗಳು ನಿನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಮಾರ್ಚ್ ಹದಿನೇಳರ ಫೈನಲ್ ವರೆಗೂ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲೇ ಬಹುತೇಕ ಪಂದ್ಯಗಳು ನಡೆಯಲಿವೆ.
ಇಂದು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಹೋಮ್ ಗ್ರೌಂಡ್ ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಕಾದಾಡಲು ಸಜ್ಜಾಗಿದೆ. ಎರಡು ತಂಡಗಳು ಟೇಬಲ್ ಟಾಪರ್ ಆಗಿದ್ದು, ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲನೇ ಸ್ಥಾನದಲ್ಲಿದ್ದರೆ. ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿದೆ. ಇಂದು ಬಲಿಷ್ಠ ತಂಡಗಳ ಕಾಳಗಕ್ಕೆ ಅರುಣ್ ಜಟ್ಲಿ ಕ್ರೀಡಾಂಗಣ ಸಜ್ಜಾಗಿದೆ.