ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಭಯಾನಕ ಘಟನೆಯು ಇಡೀ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಬಾಲಿವುಡ್ನ ಸಾಕಷ್ಟು ತಾರೆಯರು ಈ ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸಂಬಂಧ ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್, ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ನೋಡಿ ನಾನು ಬೆಚ್ಚಿ ಬಿದ್ದಿದ್ದೇನೆ. ತಪ್ಪಿತಸ್ಥರಿಗೆ ಎಂಥಾ ಶಿಕ್ಷೆ ಸಿಗಬೇಕು ಅಂದರೆ ಮಹಿಳೆಯರ ಮೇಲೆ ಇಂತಹ ದೌರ್ಜನ್ಯವನ್ನು ಎಸಗುವ ಬಗ್ಗೆ ಯೋಚನೆ ಮಾಡಲೂ ಭಯ ಪಡುವಂತಾಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಸೋನು ಸೂದ್ ಕೂಡ ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದು, ಮಣಿಪುರದ ವಿಡಿಯೋ ನನ್ನ ಆತ್ಮವನ್ನೇ ಅಲ್ಲಾಡಿಸಿದೆ. ಒಬ್ಬ ಭಾರತೀಯನಾಗಿ ನಾನು ಆಘಾತಕ್ಕೆ ಒಳಗಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ವಿಚಾರವಾಗಿ ಕಿಯಾರಾ ಅಡ್ವಾಣಿ ಕೂಡ ಟ್ವೀಟ್ ಮಾಡಿದ್ದು ಈ ಘಟನೆ ನೋಡಿ ನನಗೆ ನಾಚಿಕೆಯಾಗಿದೆ. ನನ್ನ ಅಸಹಾಯಕತೆ ಬಗ್ಗೆ ನನಗೆ ಪಶ್ಚಾತಾಪವಾಗ್ತಿದೆ. ಇದಕ್ಕೆ ಕಾರಣವಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ರಿಚಾ ಚಡ್ಡಾ ಈ ಘಟನೆ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ್ದು, ಇಬ್ಬರು ಮಹಿಳೆಯರ ಮೇಲೆ ನಡೆದ ಈ ದೌರ್ಜನ್ಯದ ವಿಡಿಯೋ ನೋಡಿ ನಿಮಗೆ ಏನು ಎನಿಸಿಲ್ಲ ಎಂದಾದರೆ, ನಿಮ್ಮನ್ನು ನೀವು ಮನುಷ್ಯ ಎಂದು ಕರೆದುಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಬಿಗ್ಬಾಸ್ ಒಟಿಟಿ ಸ್ಪರ್ಧಿ ಊರ್ಫಿ ಜಾವೇದ್ ಕೂಡ ಮಾತನಾಡಿದ್ದು, ಈ ಘಟನೆಯಿಂದ ನಾನು ವಿಚಲಿತಳಾಗಿದ್ದೇನೆ ಎಂದು ಹೇಳಿದ್ದಾರೆ.
https://twitter.com/UrmilaMatondkar/status/1681847013967826945
https://twitter.com/akshaykumar/status/1681836088653123584
https://twitter.com/akshaykumar/status/1681836088653123584