ಕ್ಷುಲ್ಲಕ ಕಾರಣಕ್ಕೆ ಯುವತಿಯರ ಬಟ್ಟೆ ಹರಿದು ದೊಣ್ಣೆಯಿಂದ ಹಲ್ಲೆ

ಡಿಜೆ ಶೋನಲ್ಲಿ ತಮ್ಮಿಷ್ಟದ ಹಾಡನ್ನು ಹಾಕದ ಕಾರಣಕ್ಕೆ ಜಗಳವಾಡಿದ ಮೂವರು ಯುವತಿಯರಿಗೆ ಬೌನ್ಸರ್​ಗಳು ಥಳಿಸಿದ ಘಟನೆಯು ಉತ್ತರ ಪ್ರದೇಶದ ಗಾಜಿಯಾಬಾದ್​ನ ಇಂದಿರಾಪುರಂನಲ್ಲಿ ಸಂಭವಿಸಿದೆ. ಬೌನ್ಸರ್​ಗಳು ಯುವತಿಯರ ಬಟ್ಟೆಗಳನ್ನು ಹರಿದು ಹಾಕಿದ್ದಾರೆ ಎಂದು ವರದಿಯಾಗಿದೆ.

ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಯುವತಿಯೊಬ್ಬರು ತಮ್ಮಿಷ್ಟದ ಹಾಡನ್ನು ಹಾಕುವಂತೆ ಡಿಜೆ ಬಳಿ ಮನವಿ ಮಾಡಿದ್ದರು. ಆದರೆ ಡಿಜೆ ನಿಮ್ಮಿಷ್ಟದ ಹಾಡನ್ನು ಹಾಕಬೇಕು ಎಂದರೆ 500 ರೂಪಾಯಿ ಕೊಡಬೇಕು ಎಂದಿದ್ದಾರೆ. ಇದಕ್ಕೆ 1500 ರೂಪಾಯಿ ನೀಡಿದ ಮೂವರು ಯುವತಿಯರು ತಮ್ಮಿಷ್ಟದ ಮೂರು ಹಾಡುಗಳನ್ನು ಹಾಕುವಂತೆ ಸೂಚಿಸಿದ್ದಾರೆ.

ಯುವತಿಯರಿಂದ ಹಣ ಪಡೆದ ಡಿಜೆ ಅವರು ಸೂಚಿಸಿದ ಹಾಡನ್ನು ಪ್ಲೇ ಮಾಡಲಿಲ್ಲ. ಇದರಿಂದ ವಾದ ಆರಂಭಗೊಂಡಿತ್ತು. ಕೂಡಲೇ ಬೌನ್ಸರ್​​ಗಳು ಮತ್ತು ಡಿಜೆ ಆಯೋಜಕರು ಸೇರಿಕೊಂಡು ಮೂವರು ಯುವತಿಯರಿಗೆ ದೊಣ್ಣೆ ಹಾಗೂ ರಾಡ್​​ಗಳಿಂದ ಥಳಿಸಿದ್ದಾರೆ. ಇವರೆಲ್ಲ ಸೇರಿಕೊಂಡು ನಮ್ಮ ಬಟ್ಟೆ ಹರಿದಿದ್ದಾರೆ ಎಂದು ಯುವತಿಯರು ಆರೋಪಿಸಿದ್ದಾರೆ.

ಆ ಸಮಯದಲ್ಲಿ ನಾವು ಹಲವು ಬಾರಿ ಪೊಲೀಸರನ್ನು ಸಂಪರ್ಕಿಸುವ ಯತ್ನ ಮಾಡಿದ್ದೆವು. ಆದರೆ ಸುಮಾರು ಅರ್ಧ ಗಂಟೆಯ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆ ಸಮಯಕ್ಕೆ ಬೌನ್ಸರ್​ಗಳು ಸ್ಥಳದಿಂದ ಎಸ್ಕೇಪ್​ ಆಗಿದ್ದರು. ನಾವು ನಮ್ಮ ಸಹೋದರರನ್ನೂ ಕರೆದವು. ಆದರೆ ಅವರ ಮೇಲೂ ಬೌನ್ಸರ್​ಗಳು ಹಲ್ಲೆ ಮಾಡಿದರು. ಹಲ್ಲೆಯಲ್ಲಿ ನಮ್ಮ ಪಕ್ಕೆಲುಬು ಹಾಗೂ ಕೈ ಮೂಳೆ ಮುರಿದಿದೆ. ನಮ್ಮ ಬಟ್ಟೆಗಳು ಹರಿದು ಹೋಗಿದೆ ಎಂದು ಹಲ್ಲೆಗೊಳಗಾದ ಯುವತಿ ಆರೋಪಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read