
ಈತ ತನ್ನನ್ನು ಚುಡಾಯಿಸಿದ್ದಲ್ಲದೇ, ಉದ್ದೇಶಪೂರಿತವಾಗಿ ಮೈ ಮುಟ್ಟುತ್ತಿದ್ದ ಎಂದು ಯುವತಿ ಆಪಾದನೆ ಮಾಡಿದ್ದಾರೆ. ಹೀಗೆ ಮಾಡದಂತೆ ಎಚ್ಚರಿಕೆ ಕೊಟ್ಟರೂ ಸಹ ತನ್ನ ವರ್ತನೆ ಮುಂದುವರೆಸಿದ ಆತನಿಗೆ ಹೀಗೆ ಥಳಿಸಿದ್ದಾಗಿ ಯುವತಿ ಹೇಳಿಕೊಂಡಿದ್ದಾರೆ.
ಕೂಡಲೇ ಕಪಾಳ ಮೋಕ್ಷಕ್ಕೀಡಾದ ಯುವಕ ಬಸ್ಸಿನಿಂದ ಇಳಿದು ಹೊರಗೋಡಿದ್ದಾನೆ. ಬಸ್ಸಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಈ ಘಟನೆ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.