
ದುರಹಂಕಾರದ ಅತಿರೇಕ ಎಂದು ಟೀಕೆಗೆ ಒಳಗಾಗಿರುವ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಶಿವಲಿಂಗದ ಮೇಲೆ ನೋಟುಗಳ ಸುರಿಮಳೆಗರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಉತ್ತರಾಖಂಡದ ಕೇದಾರನಾಥ ದೇವಸ್ಥಾನದ ಗರ್ಭಗೃಹದಲ್ಲಿ ಈ ವಿಡಿಯೋ ದಾಖಲಾಗಿದ್ದು, ಈಕೆಯ ವಿರುದ್ಧ ಪೊಲೀಸ್ ಕ್ರಮ ತೆಗೆದುಕೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಈ ಮಹಿಳೆ ಯಾರೆಂದು ತಿಳಿದು ಬಂದಿಲ್ಲ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಶ್ರೀ ಬದ್ರಿನಾಥ – ಕೇದಾರನಾಥ ಸಮಿತಿ, “ರುದ್ರಪಯಾಗ್ ಜಿಲ್ಲಾ ಪೊಲೀಸರಿಗೆ ಘಟನೆ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಆದೇಶಿಸಲಾಗಿದೆ,” ಎಂದಿದೆ.
