18 ವರ್ಷಗಳ ಹಿಂದೆ ಪತಿ ಬರೆದಿದ್ದ ಪ್ರೇಮ ಪತ್ರಗಳನ್ನು ಶೇರ್‌ ಮಾಡಿದ ಮಹಿಳೆ

18 ವರ್ಷಗಳ ಹಿಂದೆ ತನ್ನ ಪತಿ ತನಗೆ ಬರೆದ ಪ್ರೇಮ ಪತ್ರಗಳನ್ನು ಮರಳಿ ಕಂಡುಕೊಂಡ ಮಹಿಳೆಯೊಬ್ಬರು ಅವುಗಳನ್ನು ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ತನ್ನ ಗರ್ಲ್‌ಫ್ರೆಂಡ್‌ಗೆ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ವೇಳೆ ಈ ಪ್ರೇಮ ಪತ್ರಗಳನ್ನು ಬರೆದಿದ್ದಾರೆ ಈ ವ್ಯಕ್ತಿ. ಇದೀಗ, 18 ವರ್ಷಗಳ ಬಳಿಕ ಆತನ ಲೇಡಿ ಲವ್‌ ಈ ಪ್ರೇಮ ಪತ್ರಗಳನ್ನು ಮತ್ತೊಮ್ಮೆ ಕಂಡು ಕೊಂಡಿದ್ದಾರೆ.

“ಮನೆಯಲ್ಲಿದ್ದ ಹಳೆಯ ವಸ್ತುಗಳನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ನನಗೆ ಮಿ. ಐಯ್ಯರ್‌ 18.5 ವರ್ಷಗಳ ಹಿಂದೆ ಬರೆದ ಈ ಕೈಬರಹದ ಪತ್ರಗಳು ಸಿಕ್ಕಿವೆ. ಆದರೆ ತಮ್ಮ ಗರ್ಲ್‌ಫ್ರೆಂಡ್‌ಗೆ ಲ್ಯಾಬ್‌ ಪ್ರಯೋಗಗಳೂ ಹಾಗೂ ಸಚಿತ್ರವಾದ ಚಿತ್ರಗಳನ್ನು ಯಾರು ಬರೆಯುತ್ತಾರೆ? ಹೌದು ನಾನು ಈ ವ್ಯಕ್ತಿಗೆ ಯೆಸ್‌ ಎಂದಿದ್ದೆ,” ಎಂದು ಟ್ವಿಟರ್‌ ಬಳಕೆದಾರಿಣಿ ಸಾಯಿಸ್ವರೂಪಾ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಹೇಳಿಕೊಂಡಿದ್ದಾರೆ. ಆನ್ಲೈನ್‌ನಲ್ಲಿ ಶೇರ್‌ ಮಾಡಿದ ಬಳಿಕ ಈ ಪೋಸ್ಟ್‌ಗೆ ಮೂರು ಲಕ್ಷ ವೀಕ್ಷಣೆಗಳು ಸಿಕ್ಕಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read