ಸೆಂಟರ್ ಕೋರ್ಟ್‌ನಲ್ಲಿ ರಾಕೆಟ್​ ಹೊಡೆದಿದ್ದ ನೊವಾಕ್ ಜೊಕೊವಿಕ್‌ಗೆ 6.56 ಲಕ್ಷ ರೂ. ದಂಡ…!

ಸೆಂಟರ್ ಕೋರ್ಟ್‌ನಲ್ಲಿ ರ್ಯಾಕೆಟ್ ಒಡೆದಿದಿದಕ್ಕೆ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‌ಗೆ 6.56 ಲಕ್ಷ ದಂಡ ವಿಧಿಸಲಾಗಿದೆ. 2023ರ ವಿಂಬಲ್ಡನ್ ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕಾರಾಜ್ ವಿರುದ್ಧ ಸೆಂಟರ್ ಕೋರ್ಟ್‌ನಲ್ಲಿ ಸಿಡಿದೆದ್ದಿದ್ದಕ್ಕಾಗಿ ಸರ್ಬಿಯಾದ ಟೆನಿಸ್ ದಂತಕಥೆ ನೊವಾಕ್ ಜೊಕೊವಿಕ್ ಅವರಿಗೆ ದಾಖಲೆಯ ಮೊತ್ತದ ದಂಡ ವಿಧಿಸಲಾಗಿದೆ.

ಐದನೇ ಮತ್ತು ಅಂತಿಮ ಸೆಟ್‌ನಲ್ಲಿ ತನ್ನ ಸರ್ವ್‌‌ನ್ನು ತಡೆದ ಕಾರಣಕ್ಕೆ ಜೊಕೊವಿಕ್ ತನ್ನ ಟೆನಿಸ್ ರ್ಯಾಕೆಟ್‌ನಲ್ಲಿ ತನ್ನ ಕೋಪವನ್ನು ಹೊರಹಾಕಿದ್ದಾರೆ. ಜೊಕೊವಿಕ್ ನೆಟ್‌ ಬಳಿಗೆ ಹೋಗಿ ತನ್ನ ರಾಕೆಟ್ ಅನ್ನು ಮರದ ಫ್ರೇಮ್‌ ಮೇಲೆ ಒಡೆದಿದ್ದಾರೆ. ಪರಿಣಾಮ ಜೊಕೊವಿಕ್‌‌ರ ರ್ಯಾಕೆಟ್ ತುಂಡಾಗಿದೆ.

ಆದರೆ ಬ್ರೇಕ್‌ ಟೈಮ್‌ನಲ್ಲಿ ಮುರಿದ ರಾಕೆಟ್‌ನ್ನು ತಗೊಂಡು ತಮ್ಮ ಕಿಟ್ ಬ್ಯಾಗ್‌ನಲ್ಲಿ ಹಾಕಿದ್ದಾರೆ. ಇಷ್ಟಾದರೂ 36 ವರ್ಷದ ಚೇರ್ ಅಂಪೈರ್ ರಾಕೆಟ್ ಗೌರವಕ್ಕೆ ಧಕ್ಕೆ ತಂದ ಕಾರಣಕ್ಕೆ 6.56 ಲಕ್ಷ ಭಾರಿ ದಂಡವನ್ನು ವಿಧಿಸಿದ್ದಾರೆ.

ಮೊದಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ನಂತರ ಕಾರ್ಲೋಸ್ ಅಲ್ಕರಾಜ್ ಜೊಕೊವಿಕ್‌ನ್ನು ಶ್ಲಾಘಿಸಿದ್ದು ನೀವು ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ವಿಂಬಲ್ಡನ್ ಫೈನಲ್‌ನಲ್ಲಿ ಸೋತ ನಂತರ ಕಾರ್ಲೋಸ್ ಅಲ್ಕರಾಜ್‌ರನ್ನು ಜೊಕೊವಿಕ್ ಹೊಗಳಿದ್ದಾರೆ. ನಾಲ್ಕು ಗಂಟೆ 42 ನಿಮಿಷಗಳ ಕಾಲ ನಡೆದ ಈ ಮ್ಯಾರಥಾನ್ ಫೈನಲ್‌ನಲ್ಲಿ 20 ವರ್ಷದ ಅಲ್ಕರಾಜ್ ಅಂತಿಮವಾಗಿ ಜೊಕೊವಿಕ್ ಅವರನ್ನು 1-6, 7-6(6), 6-1, 3-6, 6-4 ಸೆಟ್‌ಗಳಿಂದ ಸೋಲಿಸಿದರು.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read