ಮದ್ಯದಂಗಡಿಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸುತ್ತೇವೆಂದ ಉಮಾಭಾರತಿ

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಉಮಾಭಾರತಿ ಅವರು ಮಧ್ಯಪ್ರದೇಶದಲ್ಲಿ ಮದ್ಯದ ಮಳಿಗೆಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸುವುದಾಗಿ ಹೇಳಿದ್ದಾರೆ.

ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳಕ್ಕೆ ಮದ್ಯಪಾನ ಕಾರಣವೆಂದು ದೂಷಿಸಿದ ಅವರು ಮದ್ಯದ ಅಂಗಡಿಗಳನ್ನು ಗೋಶಾಲೆಗಳನ್ನಾಗಿ ಮಾಡುವಂತೆ ಒತ್ತಾಯ ಮಾಡಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿಯವರು ಅಯೋಧ್ಯಾ ನಗರ ಟ್ರಿಸೆಕ್ಷನ್‌ನಲ್ಲಿರುವ ಮದ್ಯದ ಅಂಗಡಿಯೊಂದರ ಬಳಿ ಇರುವ ದೇವಸ್ಥಾನದ ಬಳಿ ಸೇರಿ ಸರ್ಕಾರ ಹೊಸ, ಮದ್ಯ ನೀತಿ ಘೋಷಿಸುವಂತೆ ಒತ್ತಾಯಿಸಿದರು.

ದೇವಸ್ಥಾನದ ಬಳಿ ತಮ್ಮ ನಾಲ್ಕು ದಿನಗಳ ವಾಸ್ತವ್ಯವನ್ನು ಕೊನೆಗೊಳಿಸಿದ ಉಮಾಭಾರತಿ , ರಾಜ್ಯದಲ್ಲಿ ನಿಯಂತ್ರಿತ ಮದ್ಯ ನೀತಿಯ ಬೇಡಿಕೆಯನ್ನು ಬೆಂಬಲಿಸುವ ಸಲುವಾಗಿ ‘ಮಧುಶಾಲಾ ಮೇ ಗೌಶಾಲಾ’ (ಮದ್ಯ ಮಾರಾಟ ಕೇಂದ್ರಗಳ ಸ್ಥಳದಲ್ಲಿ ಗೋಶಾಲೆಗಳು) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿರಿಯ ನಾಯಕಿ, ಭೋಪಾಲ್‌ನಿಂದ ಸುಮಾರು 350 ಕಿಮೀ ದೂರದಲ್ಲಿರುವ ನಿವಾರಿ ಜಿಲ್ಲೆಯ ಓರ್ಚಾದಲ್ಲಿರುವ ಪ್ರಸಿದ್ಧ ರಾಮ್ ರಾಜ ಸರ್ಕಾರ್ ದೇವಸ್ಥಾನದ ಬಳಿ ಇರುವ ಮದ್ಯದ ಅಂಗಡಿ ಅಕ್ರಮವಾಗಿದೆ ಎಂದು ಪ್ರತಿಪಾದಿಸಿದರು.

ಅಕ್ರಮ ಮದ್ಯದಂಗಡಿಗಳನ್ನು ಮುಚ್ಚಲು ಅಂಗಡಿಯೊಳಕ್ಕೆ ಹಸುಗಳನ್ನು ತಂದು ಕಟ್ಟಲು ಜನರಿಗೆ ಉಮಾಭಾರತಿ ಸೂಚಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read