
ಪತ್ನಿ ಮೇಲಿನ ಸಂಶಯಕ್ಕೆ ಆಕೆ ಹಾಗೂ ಆಕೆಯ ಸ್ನೇಹಿತನನ್ನು ಪತಿ ಮಹಾಶಯ ಬರ್ಬರವಾಗಿ ಹತ್ಯೆ ಮಡಿರುವ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕಲಂಜೂರು ಗ್ರಾಮದಲ್ಲಿ ನಡೆದಿದೆ.
ವೈಷ್ಣವಿ ಹಾಗೂ ವಿಷ್ಣು ಕೊಲೆಯಾದ ದುರ್ದೈವಿಗಳು. ಬೈಜು ಪತ್ನಿಯನ್ನೇ ಕೊಂದ ಆರೋಪಿ. ಪತ್ನಿ ವೈಷ್ಣವಿ ಮೊಬೈಲ್ ನಲ್ಲಿ ಆಕೆಯ ಸ್ನೇಹಿತ ವಿಷ್ಣು ಜೊತೆ ವಾಟ್ಸಪ್ ಚಾಟಿಂಗ್ ನಲ್ಲಿರುವುದನ್ನು ನೋಡಿ ಅನುಮಾನಗೊಂಡು ಈ ಕೃತ್ಯವೆಸಗಿದ್ದಾನೆ.
ಪತ್ನಿ ವೈಷ್ಣವಿ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಆಕೆ ತಪ್ಪಿಸಿಕೊಂಡು ವಿಷ್ಣುವಿನ ಮನೆಗೆ ಬಂದಿದ್ದಳು. ಈ ವೇಳೆ ಆಕೆಯನ್ನು ಮಚ್ಚಿನಿಂದ ಕಡಿದಿದ್ದಾನೆ. ಬಳಿಕ ವಿಷ್ಣುವಿನ ಮೇಲೂ ಮಚ್ಚು ಬೀಸಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಆತನನ್ನು ಆಸ್ಪತ್ರೆಗೆ ಸೇರಿಸುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.