ಬ್ರಿಟನ್‌ನ ‌ಈ ಮನೆಗೇಕೆ ಎಂಟು ಕೋಟಿ ಬೆಲೆ….?

ಬ್ರಿಟನ್‌ನ ಹಳ್ಳಿಯೊಂದರಲ್ಲಿ ಮಾರಾಟಕ್ಕೆ ಇರುವ ಈ ಮನೆಗೆ ಭಾರೀ ಬೆಲೆ ನಿಗದಿ ಪಡಿಸಲಾಗಿದೆ. ಮುಂದಿನಿಂದ ಸಾಮಾನ್ಯವಾಗಿ ಕಾಣುವ ಈ ಮನೆಯ ಹಿಂಭಾಗದಲ್ಲಿರುವ ಆಸ್ತಿಯ ಕಾರಣದಿಂದಾಗಿಯೇ £800,000 (8.1 ಕೋಟಿ ರೂ) ಬೆಲೆ ಇದಕ್ಕೆ ನ್ಯಾಯಸಮ್ಮತ ಎನಿಸುತ್ತದೆ.

18ನೇ ಶತಮಾನದ ಈ ಡಬಲ್ ಫ್ರಂಟೆಡ್ ಫಾರ್ಮ್ ಹೌಸ್‌ ಪೂರ್ವ ಯಾರ್ಕ್‌ಶೈರ್‌ನ ಪ್ರೆಸ್ಟನ್‌ ಬಳಿಯ ಹಳ್ಳಿಯೊಂದರ ಮುಖ್ಯ ಬೀದಿಯಲ್ಲಿದೆ.

ಮನೆಯ ಹಿಂಬದಿಯಲ್ಲಿ ಕುದುರೆಗಳನ್ನು ಸಾಕಲು ಸಕಲ ವ್ಯವಸ್ಥೆಗಳಿದ್ದು, ಜಮೀನಿನುದ್ದಕ್ಕೂ ಹೊರ ಕಟ್ಟಡಗಳಿವೆ. ಈ ಫಾರ್ಮ್ ಹೌಸ್‌ನಿಂದ ಗ್ರಾಮದ ಚರ್ಚ್‌‌ನ ಮನೋಹರ ನೋಟ ಸಿಗಲಿದ್ದು, ಸುಂದರವಾದ ಭೂದೃಶ್ಯದಲ್ಲಿ ನೆಲೆಸಿರುವ ಕಾರಣ ಈ ಆಸ್ತಿಗೆ ಇಷ್ಟೆಲ್ಲಾ ಬೆಲೆ ಇದೆ.

ವಿಶಾಲವಾದ ಮನೆಯಲ್ಲಿ ಮೂರು ರಿಸೆಪ್ಷನ್ ಕೋಣೆಗಳು, ನಾಲ್ಕು ಬೆಡ್‌ರೂಂಗಳು ಹಾಗೂ ಬಾತ್‌ರೂಂ ಇದೆ. ಗ್ಯಾರೇಜ್, ಖಾಸಗಿ ಪಾರ್ಕಿಂಗ್ ಹಾಗೂ ಡ್ರೈವ್‌ವೇಗಳ ಸವಲತ್ತುಗಳೂ ಸಹ ಮನೆಯ ನಿವಾಸಿಗಳಿಗೆ ಸಿಗಲಿದೆ. ಅಲ್ಲದೇ ವಿಶಾಲವಾದ ಲಾನ್ ಸಹ ಈ ಆಸ್ತಿಯ ಐಷಾರಾಮವನ್ನು ಹೆಚ್ಚಿಸಿದೆ.

ಇದೇ ಪ್ರದೇಶದಲ್ಲಿ ಆಸ್ತಿ ಖರೀದಿಗೆ ಇರುವ ಬೆಲೆಗಳಿಗಿಂತ ಈ ಆಸ್ತಿಯ ಬೆಲೆ ನಾಲ್ಕು ಪಟ್ಟು ಹೆಚ್ಚಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read