ಮೊಬೈಲ್​ನಲ್ಲಿ ಚಾಟ್​ ಮಾಡುತ್ತಾ ರಸ್ತೆಯಲ್ಲಿ ಓಡಾಡುತ್ತೀರಾ..? ಹಾಗಾದ್ರೆ ನೋಡಲೇಬೇಕು ಈ ವಿಡಿಯೋ…!

ಸೋಶಿಯಲ್​ ಮೀಡಿಯಾ ಮೂಲಕ ಸಾರ್ವಜನಿಕರಿಗೆ ಸುರಕ್ಷತಾ ಸಂದೇಶಗಳನ್ನು ರವಾನಿಸೋದ್ರಲ್ಲಿ ದೆಹಲಿ ಪೊಲೀಸರು ಮುಂಚೂಣಿಯಲ್ಲಿ ಇರ್ತಾರೆ. ಮೀಮ್ಸ್​ ಹಾಗೂ ವೈರಲ್ ವಿಡಿಯೋಗಳ ಮೂಲಕ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ಇರಬೇಕು ಎಂಬುದರ ಬಗ್ಗೆ ದೆಹಲಿ ಪೊಲೀಸರು ಪಾಠ ಮಾಡುತ್ತಲೇ ಇರ್ತಾರೆ.

ಇದೀಗ ದೆಹಲಿ ಪೊಲೀಸರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಥವಾ ವಾಹನ ಚಲಾವಣೆ ಮಾಡುವಾಗ ಯಾವೆಲ್ಲ ರೀತಿಯಲ್ಲಿ ಸಮಸ್ಯೆ ಆಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಾಕಿಂಗ್​ ಮಾಡುವಾಗ ವ್ಯಕ್ತಿಯೊಬ್ಬ ಮೊಬೈಲ್​ನಲ್ಲಿ ಚಾಟ್​ ಮಾಡಿದ್ದು ಸೀದಾ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೇ ಅನೇಕರು ವಿದ್ಯುತ್​ ಕಂಬಗಳಿಗೆ ಡಿಕ್ಕಿ ಹೊಡೆದು ಹೊಂಡಕ್ಕೆ ಬೀಳುವುದು, ಕೊಳದಲ್ಲಿ ಬೀಳುವುದು, ಅಥವಾ ಮೆಟ್ಟಿಲುಗಳಲ್ಲಿ ಜಾರಿ ಬೀಳುವುದು ಹೀಗೆ ಸಾಕಷ್ಟು ನಿದರ್ಶನಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ದೆಹಲಿ ಪೊಲೀಸರು ನಿಮಗೆ ನಡೆಯುವಾಗಲೇ ಚಾಟ್​ ಮಾಡಿಕೊಂಡು ಹೋಗಲು ಸಾಧ್ಯವಿಲ್ಲ ಎಂದ ಮೇಲೆ ವಾಹನ ಚಲಾಯಿಸುವಾಗ ಟೆಕ್ಸ್ಟ್​ ಮಾಡೋಕೆ ಸಾಧ್ಯವೇ..? ಎಂದು ಶೀರ್ಷಿಕೆ ನೀಡಿದ್ದಾರೆ . ಈ ಮೂಲಕ ರಸ್ತೆಗಳಲ್ಲಿ ಸಂಚರಿಸುವಾಗ ನಿಮ್ಮ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read