2014 ರ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ ಹಿರಿಯ ನಟಿ ರೇಖಾ…! ಕೊನೆಗೂ ಬಯಲಾಯ್ತು ʼರಹಸ್ಯʼ

ಬಾಲಿವುಡ್​ ಹಿರಿಯ ನಟಿ ರೇಖಾ ಹಿಂದಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಮರೆಯುವಂತೆಯೇ ಇಲ್ಲ. ತಮ್ಮ ವೃತ್ತಿ ಜೀವನದುದ್ದಕ್ಕೂ ಬಾಲಿವುಡ್​ ಚಿತ್ರರಂಗವನ್ನೂ ಆಳಿದ ಖ್ಯಾತಿ ರೇಖಾರಿಗೆ ಸಲ್ಲುತ್ತದೆ.

ವೃತ್ತಿ ಜೀವನದ ತುತ್ತ ತುದಿಯಲ್ಲಿ ಇರುವಾಗಲೇ ಅಂದರೆ 2014ರ ಬಳಿಕ ರೇಖಾ ಯಾವುದೇ ಸಿನಿಮಾಗಳಿಗೆ ಸಹಿ ಹಾಕಲೇ ಇಲ್ಲ. ರೇಖಾ ಯಾಕೆ ಇಂತಹದ್ದೊಂದು ನಿರ್ಧಾರ ಕೈಗೊಂಡರು ಎಂಬ ಪ್ರಶ್ನೆ ಅನೇಕರಲ್ಲಿತ್ತು. ಇದೀಗ ಸಂದರ್ಶನವೊಂದರಲ್ಲಿ ನಟಿ ರೇಖಾ ತಾವ್ಯಾಕೆ ಇಂತಹದ್ದೊಂದು ನಿರ್ಧಾರ ಕೈಗೊಂಡಿದ್ದು ಎಂಬುದರ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ.

ನನ್ನ ವ್ಯಕ್ತಿತ್ವ ಏನಿದ್ದರೂ ನನ್ನದು. ಆದರೆ ನನ್ನ ಸಿನಿಮಾ ವ್ಯಕ್ತಿತ್ವ ನೋಡುಗರ ದೃಷ್ಟಿಯಲ್ಲಿದೆ. ಆದ್ದರಿಂದ ನಾನು ಎಲ್ಲಿ ಇರಬೇಕು ಹಾಗೂ ಎಲ್ಲಿ ಇರಬಾರದು ಎಂಬುದನ್ನು ನಾನೇ ಆರಿಸಿಕೊಳ್ಳುತ್ತೇನೆ. ನಾನು ಏನನ್ನು ಪ್ರೀತಿಸುತ್ತೇನೋ ಅದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನಾನು ಹೊಂದಿರೋದಕ್ಕೆ ನಾನು ನಿಜಕ್ಕೂ ಧನ್ಯ ಎಂದು ಹೇಳಿದ್ದಾರೆ.

ಇದೇ ವೇಳೆ ಸಂದರ್ಶಕರು ರೇಖಾರ ಬಳಿಯಲ್ಲಿ ನೀವು ಅತ್ಯಂತ ಆಳವಾಗಿ ಪ್ರೀತಿಸಿದ ಯಾವುದೇ ವ್ಯಕ್ತಿ ಹಾಗೂ ವಸ್ತುವಿನ ಮೇಲೆ ಪ್ರೀತಿ ಕಡಿಮೆಯಾಗಿದೆಯೇ ಎಂದು ಕೇಳಿದರು. ನಾನು ಒಮ್ಮೆ ಒಂದು ಸಂಬಂಧವನ್ನು ಹುಟ್ಟು ಹಾಕಿದರೆ ಅದನ್ನು ಎಂದಿಗೂ ಶಾಶ್ವತವಾಗಿ ಇಟ್ಟುಕೊಳ್ಳುತ್ತೇನೆ. ನಾನು ಸಿನಿಮಾವನ್ನು ಮಾಡಲಿ ಬಿಡಲಿ ನಾನು ಸಿನಿಮಾವನ್ನು ಬಿಡೋದಿಲ್ಲ. ನಾನು ಇಷ್ಟಪಟ್ಟಿದ್ದನ್ನು ಆಸ್ವಾದಿಸಲು ನನ್ನ ಬಳಿ ಸಾಕಷ್ಟು ನೆನಪುಗಳಿವೆ. ಸರಿಯಾದ ಸಮಯ ಬಂದಾಗ ಸರಿಯಾದ ಪ್ರಾಜೆಕ್ಟ್​ ನನ್ನನ್ನು ಅರಸಿಕೊಂಡು ಬರಲಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read