alex Certify BIG NEWS:‌ ವಿಮಾನಯಾನ ಸಿಬ್ಬಂದಿ ಸುಗಂಧದ್ರವ್ಯ ಬಳಸಲು ನಿರ್ಬಂಧ ? ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ವಿಮಾನಯಾನ ಸಿಬ್ಬಂದಿ ಸುಗಂಧದ್ರವ್ಯ ಬಳಸಲು ನಿರ್ಬಂಧ ? ಇದರ ಹಿಂದಿದೆ ಈ ಕಾರಣ

Why DGCA May Ask Pilots & Crew To Avoid Using Mouthwash And Perfume?

ಭಾರತ ನಾಗರಿಕ ವಿಮಾನಯಾನ ನಿರ್ದೇಶನಾಲಯ, ಪೈಲಟ್‌ಗಳು ಮತ್ತು ಸಿಬ್ಬಂದಿಗಳಿಗೆ ಉಸಿರಾಟ ಪರೀಕ್ಷೆ (ಬ್ರೀತ್‌ಲೈಸರ್ ಟೆಸ್ಟ್ ) ಕಾರಣಕ್ಕಾಗಿ ಸುಗಂಧ ದ್ರವ್ಯಗಳನ್ನು ಬಳಸದಂತೆ ಕಡ್ಡಾಯಗೊಳಿಸುವ ಕರಡನ್ನು ಪ್ರಸ್ತಾಪಿಸಿದೆ. ಏಕೆಂದರೆ ಸುಗಂಧ ದ್ರವ್ಯಗಳು ಸಾಮಾನ್ಯವಾಗಿ ಹೆಚ್ಚಿನ ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತವೆ ಮತ್ತು ಉಸಿರಾಟದ ಪರೀಕ್ಷೆಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಉಸಿರಾಟದ ಪರೀಕ್ಷೆ ವೇಳೆ ಪಾಸಿಟಿವ್ ವರದಿ ಬರುವ ಸಾಧ್ಯತೆ ಇದೆ ಎಂದು ಹೇಳಿದೆ.

ಕರಡು ಪ್ರಕಾರ, “ಯಾವುದೇ ಪೈಲಟ್ ಅಥವಾ ಸಿಬ್ಬಂದಿ ಮೌತ್‌ವಾಶ್/ಟೂತ್ ಜೆಲ್/ಸುಗಂಧ ದ್ರವ್ಯ ಅಥವಾ ಆಲ್ಕೋಹಾಲ್ ಅಂಶವನ್ನು ಹೊಂದಿರುವ ಉತ್ಪನ್ನದಂತಹ ಯಾವುದೇ ಪದಾರ್ಥವನ್ನು ಬಳಸಬಾರದು, ಇದು ಧನಾತ್ಮಕ ಬ್ರೀಥಲೈಸರ್ ಪರೀಕ್ಷೆಗೆ ಕಾರಣವಾಗಬಹುದು. ಇಂತಹ ಉತ್ಪನ್ನ ಬಳಸುವ ಯಾವುದೇ ಸಿಬ್ಬಂದಿ ಸದಸ್ಯರು ಕಾರ್ಯನಿರ್ವಹಿಸುವ ಮೊದಲು ಕಂಪನಿಯ ವೈದ್ಯರನ್ನು ಸಂಪರ್ಕಿಸಬೇಕು” ಎಂದು ಹೇಳಿದೆ.

ಇದು ನಾಗರಿಕ ವಿಮಾನಯಾನ ಅಗತ್ಯತೆಯ (CAR ) ಡ್ರಾಫ್ಟ್ ಮಾತ್ರವಾಗಿದ್ದು ಸಾರ್ವಜನಿಕವಾಗಿ ಪ್ರತಿಕ್ರಿಯೆ ಪಡೆಯಲಾಗುವುದು ಎಂದು DGCA ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...