alex Certify ʼಹನುಮಾನ್ ಚಾಲೀಸಾʼವನ್ನು ಇಂಗ್ಲಿಷ್‌ಗೆ ಅನುವಾದಿಸಿದ ವಿಕ್ರಮ್ ಸೇಠ್ ಯಾರು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹನುಮಾನ್ ಚಾಲೀಸಾʼವನ್ನು ಇಂಗ್ಲಿಷ್‌ಗೆ ಅನುವಾದಿಸಿದ ವಿಕ್ರಮ್ ಸೇಠ್ ಯಾರು ಗೊತ್ತಾ…..?

‘ಎ ಸೂಟೇಬಲ್ ಬಾಯ್’ ಮತ್ತು ‘ದ ಗೋಲ್ಡನ್ ಗೇಟ್’ ನಂತಹ ಜನಪ್ರಿಯ ಕಾದಂಬರಿಗಳನ್ನು ಬರೆದಿರುವ ವಿಕ್ರಂ ಸೇಠ್, ಹನುಮಾನ್ ಚಾಲೀಸಾವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಆದರೆ ಈ ಪುಸ್ತಕವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ವಿಕ್ರಮ್ ಸೇಠ್ ತಮ್ಮ ಮುಕ್ತ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಹನುಮಾನ್ ಚಾಲೀಸಾವನ್ನು ಇಂಗ್ಲಿಷ್‌ಗೆ ಏಕೆ ಅನುವಾದಿಸಿದರು ಎಂಬುದನ್ನು ನೋಡೋಣ.

ವಿಕ್ರಮ್ ಸೇಠ್ ಒಬ್ಬ ಭಾರತೀಯ ಲೇಖಕ ಮತ್ತು ಕವಿ. ಅನೇಕ ಕಾದಂಬರಿಗಳು ಮತ್ತು ಕವನಗಳನ್ನು ಬರೆದಿದ್ದಾರೆ. ಪದ್ಮಶ್ರೀ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪ್ರವಾಸಿ ಭಾರತೀಯ ಸಮ್ಮಾನ್ ಸೇರಿದಂತೆ ಅನೇಕ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ.

ಅವರ ಸಾಹಿತ್ಯ ಶೈಲಿಗಳು ಓದುಗರನ್ನು ಆಕರ್ಷಿಸಿವೆ. ಭಾರತ, ಇಂಗ್ಲೆಂಡ್ ಮತ್ತು ಅಮೆರಿಕವನ್ನು ಆಧರಿಸಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸೇಠ್ ಅವರ ‘ಎ ಸೂಟೇಬಲ್ ಬಾಯ್’ ವಿಶ್ವದ ಅತಿ ಉದ್ದದ ಇಂಗ್ಲಿಷ್ ಕಾದಂಬರಿಗಳಲ್ಲಿ ಒಂದಾಗಿದೆ. ಈ ಕಾದಂಬರಿಯನ್ನು 1993 ರಲ್ಲಿ ಪ್ರಕಟಿಸಲಾಯಿತು.

ವಿಕ್ರಮ್ ಸೇಠ್ ಅವರ ತಾಯಿ ಲೀಲಾ ಸೇಠ್, ಭಾರತದಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಮಹಿಳೆ. ವಿಕ್ರಮ್ ಸೇಠ್ ಮೂಲತಃ ಕೋಲ್ಕತ್ತಾದವರು. ವಿಕ್ರಮ್ ಸೇಠ್ ಬಾಲ್ಯದಿಂದಲೂ ಹನುಮಾನ್ ಚಾಲೀಸಾವನ್ನು ಇಷ್ಟಪಡುತ್ತಿದ್ದರು. 10 ವರ್ಷಗಳ ಹಿಂದೆ ಹನುಮಾನ್‌ ಚಾಲೀಸಾವನ್ನು ಅನುವಾದ ಮಾಡಬೇಕೆಂಬ ಯೋಚನೆ ಅವರಿಗೆ ಬಂದಿತ್ತು. ಕೂಡಲೇ ಕಾರ್ಯೋನ್ಮುಖರಾದ ಸೇಠ್‌ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಹಿಂದಿ ಅರ್ಥವಾಗದ ಜನರು ಕೂಡ ಹನುಮಾನ್‌ ಚಾಲೀಸಾದ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ಅವರ ಉದ್ದೇಶ. ಹಾಗಾಗಿಯೇ ಅದನ್ನು ಪ್ರಕಟಿಸುವ ಆಲೋಚನೆ ಅವರಿಗೆ ಬಂದಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...