ಏವಿಯನ್ ಫ್ಲೂ ನಿಂದ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದು, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಏವಿಯನ್ ಫ್ಲೂ ಮೊಟ್ಟ ಮೊದಲ ಬಾರಿಗೆ ಮಾನವವನಲ್ಲಿ ಕಾಣಿಸಿಕೊಂಡಿದ್ದು, ಮೆಕ್ಸಿಕನ್ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ.
59 ವರ್ಷದ ವ್ಯಕ್ತಿ ಜ್ವರ, ಉಸಿರಾಟದ ತೊಂದರೆ, ಅತಿಸಾರ, ವಾಕರಿಕೆ ಹಾಗೂ ಸಾಮಾನ್ಯ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರಲ್ಲಿ ಏವಿಯನ್ ಸೋಂಕು ದೃಢಪಟ್ಟಿತ್ತು. ಏಪ್ರಿಲ್ 24ರಂದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದು ಜಾಗತಿಕವಾಗಿ ವರದಿಯಾಗಿರುವ A(H5N2) ಮೊದಲ ಮಾನವ ಪ್ರಕರಣವಾಗಿದೆ ಎಂದು WHO ತಿಳಿಸಿದೆ.
ಏವಿಯನ್ ಇನ್ಫ್ಲುಯೆಂಜಾದ ಉಪವಿಧದ ಪ್ರಕರಣಗಳು ಮೆಕ್ಸಿಕೋದಲ್ಲಿ ಕೋಳಿಗಳಲ್ಲಿ ವರದಿಯಾಗಿದೆ. ಸೋಂಕಿತ ವ್ಯಕ್ತಿ ಇತರ ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು. ತೀವ್ರವಾದ ರೋಗಲಕ್ಷಣಗಳು ಆರಂಭವಾಗುವ ಮೊದಲುಇತರ ಕಾರಣಗಳಿಗಾಗಿ ಮೂರು ವಾರಗಳ ಕಾಲ ಹಾಸಿಗೆ ಹಿಡಿದಿದ್ದರು ಎಂದು ತಿಳಿಸಿದೆ. ಸೋಂಕಿತ ವ್ಯಕ್ತಿ ಕೋಳಿ ಅಥವಾ ಇನ್ನಿತರ ಪ್ರಾಣಿಗಳಿಗೆ ಮುಂಚಿತವಾಗಿ ಒಡ್ಡಿಕೊಂಡಿಲ್ಲ. ಆದಾಗ್ಯೂ ಆತನನ್ನಿ ಸೋಂಕು ಹರಡಲು ಕಾರಣ ತಿಳಿದುಬಂದಿಲ್ಲ.