ಐದು ದಿನಗಳ ಅದ್ಧೂರಿ ಹಬ್ಬ ದೀಪಾವಳಿ ನವೆಂಬರ್ ಹತ್ತರಿಂದ ಶುರುವಾಗ್ತಿದೆ. ದೀಪಾವಳಿ ಧನತ್ರಯೋದಶಿಯಿಂದ ಶುರುವಾಗಲಿದ್ದು, ದೀಪಾವಳಿಗೆ ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಮಯದಲ್ಲಿ ಲಕ್ಷ್ಮಿ ಹಾಗೂ ಗಣಪತಿ ಪೂಜೆಗೆ ವಿಶೇಷ ಮಹತ್ವವಿದೆ. ಜನರು ದೀಪಾವಳಿಯ ಪೂಜೆಗೆ ಗಣೇಶ ಹಾಗೂ ಲಕ್ಷ್ಮಿಯ ಮೂರ್ತಿಯನ್ನು ಖರೀದಿ ಮಾಡ್ತಾರೆ. ಯಾವ ದಿನ ಲಕ್ಷ್ಮಿ ಹಾಗೂ ಗಣೇಶ ಮೂರ್ತಿ ಖರೀದಿ ಮಾಡೋದು ಒಳ್ಳೆಯದು ಎಂಬ ಸಂಗತಿ ಜನರಿಗೆ ತಿಳಿದಿರಬೇಕು.
ನವೆಂಬರ್ ಹತ್ತರಂದು ಧನ್ತೇರಸ್ ಶುರುವಾಗುವ ಕಾರಣ ನೀವು ಐದು ದಿನದಲ್ಲಿ ಯಾವ ದಿನವಾದ್ರೂ ಗಣೇಶ ಹಾಗೂ ಲಕ್ಷ್ಮಿ ಮೂರ್ತಿ ಖರೀದಿ ಮಾಡಬಹುದು. ಆದ್ರೆ ಧನತ್ರಯೋದಶಿ ದಿನ ಮೂರ್ತಿ ಖರೀದಿ ಮಾಡುವುದು ಬಹಳ ಸೂಕ್ತ. ಈ ದಿನ ಲಕ್ಷ್ಮಿ ನಿಮ್ಮ ಮನೆಗೆ ಬಂದ್ರೆ ಮನೆಯಲ್ಲಿ ಸುಖ, ಶಾಂತಿ, ಸಂತೋಷ ನೆಲೆಸುತ್ತದೆ.
ನವೆಂಬರ್ ಹತ್ತರಂದು ಬೆಳಿಗ್ಗೆ 11 ಗಂಟೆ 43 ನಿಮಿಷದೊಂದ 12 ಗಂಟೆ 27 ನಿಮಿಷದವರೆಗೆ ಒಳ್ಳೆ ಮುಹೂರ್ತವಿದೆ. ನೀವು ಮೂರ್ತಿ ಖರೀದಿ ಮಾಡುವ ವೇಳೆ ಕಮಲದ ಮೇಲೆ ಕುಳಿತ ಲಕ್ಷ್ಮಿಯನ್ನು ಖರೀದಿ ಮಾಡಿ. ಹಾಗೆಯೇ ಕುಳಿತ ಗಣೇಶ ಮೂರ್ತಿ ಖರೀದಿ ಮಾಡಿ. ನಿಂತ ಗಣೇಶ ಮೂರ್ತಿ ಒಳ್ಳೆಯದಲ್ಲ. ಕೋಪಗೊಂಡ ಹಾಗೂ ಭಗ್ನವಾದ ಮೂರ್ತಿಯನ್ನು ಮನೆಗೆ ತರಬೇಡಿ. ಕಪ್ಪು, ಕಂದು ಬಣ್ಣದ ಮೂರ್ತಿಯನ್ನು ಖರೀದಿ ಮಾಡಬೇಡಿ. ಬಲ ಸೊಂಡಿಲು ಹೊಂದಿರುವ ಗಣಪತಿ ಮೂರ್ತಿ ಖರೀದಿ ಮಾಡಬೇಡಿ.