ಯಾವುದೇ ರೀತಿಯ ಸಾಹಸ ಕ್ರೀಡೆಯಲ್ಲಿ ತೊಡಗುವಾಗ ಅಪಾಯ ಬೆನ್ನಹಿಂದೆಯೇ ಇರುತ್ತದೆ. ಅಂಥದ್ದೇ ವಿಡಿಯೋ ವೈರಲ್ ಆಗಿದೆ.
ಫ್ರೆಂಚ್ ಸ್ಕೀಯರ್ ಒಬ್ಬ ಮಾರಣಾಂತಿಕ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಫ್ರೆಂಚ್ ಸ್ಕೀಯಿಂಗ್ ಗುಂಪಿನ ಸದಸ್ಯ ಲೆಸ್ ಪೊವ್ಟೋಸ್ ಸ್ಕೀಯಿಂಗ್ ಮಾಡುವಾಗ ಈ ಘಟನೆ ಸಂಭವಿಸಿದೆ.
ಮೀಜೆ ಪರ್ವತದ ಮೇಲೆ ಹಿಮಾವೃತ ಹಾದಿಯಲ್ಲಿ ಸಾಗುತ್ತಿದ್ದಾಗ, ಅನುಭವಿ ಸ್ಕೀಯರ್ ಆಕಸ್ಮಿಕವಾಗಿ ಆಳವಾದ ಬಿರುಕಿನ ಮೇಲೆ ಉರುಳಿದ್ದಾರೆ ಮತ್ತು ಒಳಗೆ ಕುಸಿದಿದ್ದಾರೆ. ಸ್ಕೀಯರ್‌ನ ಹೆಲ್ಮೆಟ್‌ಗೆ ಜೋಡಿಸಲಾದ ಕ್ಯಾಮೆರಾದಲ್ಲಿ ಹೃದಯಬಡಿತ ನಿಲ್ಲಿಸುವ ವಿಡಿಯೋ ವೈರಲ್ ಆಗಿದ್ದು, ನೆಟಿಜನ್‌ಗಳನ್ನು ಬೆಚ್ಚಿಬೀಳಿಸಿದೆ.
ಡೈಲಿಮೇಲ್‌ನ ವರದಿಯ ಪ್ರಕಾರ, ಗುಂಪು ಅವನನ್ನು ರಕ್ಷಿಸಲು ಪ್ರಯಾಸಪಟ್ಟಿತು. ಕ್ರ್ಯಾಂಪಾನ್‌ಗಳು, ಕೊಡಲಿ ಮತ್ತು ಸಲಕೆಗಳನ್ನು ಬಳಸಿ ಹಲವು ಗಂಟೆಗಳ ಬಳಿಕ ಹಿಮಾವೃತ ಆಳದಿಂದ ಹೊರಕ್ಕೆ ಎತ್ತಲಾಗಿದೆ.
https://twitter.com/OTerrifying/status/1650187687553540096?ref_src=twsrc%5Etfw%7Ctwcamp%5Etweetembed%7Ctwterm%5E1650187687553540096%7Ctwgr%5Ec7fb69e27700d45a96369ad76c6718789472b85a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhen-a-skier-fell-into-a-deep-icy-glacier-in-french-alps-and-survived-watch-viral-video-2364410-2023-04-25