alex Certify ಕಮಲ್ ಹಾಸನ್ ಜೊತೆ ಶ್ರೀದೇವಿ ಮದುವೆಯಾಗಬೇಕು ಎಂದು ಬಯಸಿದ್ದರಂತೆ ನಟಿ ತಾಯಿ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಮಲ್ ಹಾಸನ್ ಜೊತೆ ಶ್ರೀದೇವಿ ಮದುವೆಯಾಗಬೇಕು ಎಂದು ಬಯಸಿದ್ದರಂತೆ ನಟಿ ತಾಯಿ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ….!

ಮುಂಬೈ: ನಟ ಕಮಲ್ ಹಾಸನ್ ಮತ್ತು ದಿವಂಗತ ನಟಿ ಶ್ರೀದೇವಿ ಹಲವು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರ ತೆರೆ ಮೇಲಿನ ಕೆಮಿಸ್ಟ್ರಿ ಅಭಿಮಾನಿಗಳ ಮನಸೂರೆಗೊಂಡಿತ್ತು.

ಹಿಂದಿಯಲ್ಲಿ ಬಾಲು ಮಹೇಂದ್ರ ಅವರ ʼಸದ್ಮಾʼ ದಲ್ಲಿ ಇಬ್ಬರೂ ಒಟ್ಟಿಗೆ ಅಭಿನಯಿಸಿದ ನಂತರ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳನ್ನು ಪುಳಕಿತಗೊಳಿಸಿತು. ಈ ಸಿನಿಮಾ ಮೊದಲು ತಮಿಳಿನಲ್ಲಿ ʼಮೂಂನ್ರಂ ಪಿರೈʼ ಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾದ ನಂತರ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಭಾರಿ ಮೆಚ್ಚುಗೆಗೆ ಪಾತ್ರವಾಯಿತು.

ಅಭಿಮಾನಿಗಳಿಗೆ ಮಾತ್ರವಲ್ಲ, ಶ್ರೀದೇವಿಯ ತಾಯಿ ರಾಜೇಶ್ವರಿ ಬಹುಶಃ ದೊಡ್ಡ ಅಭಿಮಾನಿಯಾಗಿದ್ದರು. ಎಷ್ಟರ ಮಟ್ಟಿಗೆ ಎಂದರೆ ಇವರಿಬ್ಬರು ನಿಜ ಜೀವನದಲ್ಲಿ ಮದುವೆಯಾಗಬೇಕೆಂದು ಅವರು ಬಯಸಿದ್ದರಂತೆ.

ಶ್ರೀದೇವಿ ಅವರ ಸಂಸ್ಮರಣಾ ಸಮಾರಂಭದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ. ನಟ ಕಮಲ್ ಹಾಸನ್ ಈ ಮಾಹಿತಿಯನ್ನು ಬಹಿರಂಗಪಡಿಸಿದರು. ತಾನು ಮತ್ತು ಶ್ರೀದೇವಿ ನಿಕಟ ಬಾಂಧವ್ಯವನ್ನು ಹಂಚಿಕೊಂಡಿದ್ದೇವೆ. ಶ್ರೀದೇವಿಯನ್ನು ಮದುವೆಯಾಗಲು ಅವರ ತಾಯಿ ಆಗಾಗ್ಗೆ ಕೇಳುತ್ತಿದ್ದರು ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.

ತನ್ನ ಕುಟುಂಬವೆಂದು ಪರಿಗಣಿಸುವ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಕಮಲ್ ಹಾಸನ್ ಈ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಗಿ ಹೇಳಿದ್ದಾರೆ. ಅಲ್ಲದೆ, ಶ್ರೀದೇವಿ, ಕಮಲ್ ಹಾಸನ್ ರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಅವರನ್ನು ಸರ್ ಎಂದೇ ಸಂಬೋಧಿಸುತ್ತಿದ್ದರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...