ದೇಶದ ಇತಿಹಾಸದಲ್ಲಿ ಅತ್ಯಂತ ದುಬಾರಿ ನಿರ್ಮಾಣದ ಚಿತ್ರವೆಂದು ಕರೆಯಲಾಗುವ ʼಆದಿಪುರುಷ್ʼ ಚಿತ್ರದ ವಿಎಫ್‌ಎಕ್ಸ್ ಎಫೆಕ್ಟ್ ಕುರಿತು ಚಿತ್ರ ರಸಿಕರಿಂದ ಭಾರೀ ಟೀಕೆಗಳು ಕೇಳಿ ಬಂದಿವೆ.
500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಚಿತ್ರವೀಗ ಟ್ರೋಲರ್‌ಗಳಿಗೆ ಆಹಾರವಾಗಿದ್ದು, ಭಾರೀ ಅಪಹಾಸ್ಯಕ್ಕೀಡಾಗಿದೆ. ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸಿರುವ ಸೈಫ್ ಅಲಿ ಖಾನ್‌ರ ಹೇರ್‌ಸ್ಟೈಲ್ ಹಾಗೂ ಬಟ್ಟೆಗಳು ತುಂಡೈಕಳ ಅವತಾರದಂತಿದೆ ಎಂದು ಟೀಕಿಸಿರುವ ಟ್ರೋಲರ್‌ಗಳು ಅದನ್ನು ’ಛಾಪ್ರಿ ಗೆಟಪ್’ ಎಂದಿದ್ದಾರೆ.
ಸಮಾಜದಲ್ಲಿ ಎಲ್ಲರಂತೆ ಇರದೇ ತಮ್ಮದೇ ಚಿತ್ರವಿಚಿತ್ರ ಗೆಟಪ್‌ಗಳು ಹಾಗೂ ಮ್ಯಾನರಿಸಂಗಳಿಂದ ಗಮನ ಸೆಳೆಯುವ ತುಂಡೈಕಳನ್ನು ’ಛಾಪ್ರಿ’ ಎಂದು ಹಿಂದಿಯಲ್ಲಿ ಕರೆಯಲಾಗುತ್ತದೆ.
’ನನ್ನಲ್ಲಿ ಲಕ್ಷ ಲಕ್ಷ ಕೆಟ್ಟ ವಿಚಾರಗಳಿವೆ. ಆದರೆ ನಾನು ಎಂದಿಗೂ ಛಾಪ್ರಿ ಆಗಿರಲಿಲ್ಲ,” ಎಂದು ಖುದ್ದು ರಾವಣನೇ ಈ ಚಿತ್ರದಲ್ಲಿ ತನ್ನ ಪಾತ್ರವನ್ನು ತೋರಿಸಿರುವ ಕುರಿತು ಬೇಸರದಲ್ಲಿ ಹೇಳಿರುವಂತೆ ಮೀಮ್ ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ.
https://twitter.com/superking1816/status/1669642399747035136?ref_src=twsrc%5Etfw%7Ctwcamp%5Etweetembed%7Ctwterm%5E1669642399747035136%7Ctwgr%5Ec178df100c69eb09673f80ab1ed9874972bfeaf3%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhat-is-chhapri-adipurush-release-reaction-2394073-2023-06-16
https://twitter.com/iSoldier___/status/1669637786796969984?ref_src=twsrc%5Etfw%7Ctwcamp%5Etweetembed%7Ctwterm%5E1669637786796969984%7Ctwgr%5Ec178df100c69eb09673f80ab1ed9874972bfeaf3%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwhat-is-chhapri-adipurush-release-reaction-2394073-2023-06-16