alex Certify ಗಮನಿಸಿ : ‘ಡೆಂಗ್ಯೂ’ ಜ್ವರದ ನಿಯಂತ್ರಣ ಕ್ರಮಗಳೇನು..! ಚಿಕಿತ್ಸೆ ಹೇಗೆ..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ‘ಡೆಂಗ್ಯೂ’ ಜ್ವರದ ನಿಯಂತ್ರಣ ಕ್ರಮಗಳೇನು..! ಚಿಕಿತ್ಸೆ ಹೇಗೆ..? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದರೊಂದಿಗೆ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಘಿ ಬಾರದಂತೆ ಜಾಗ್ರತೆ ವಹಿಸಿ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಡೆಂಘಿ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದಿರಿ. ಕೂಡಲೇ ಆಸ್ಪತ್ರೆಗೆ ತೆರಳಿ ಡೆಂಘಿ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಿರಿ.

ಡೆಂಗಿ ಜ್ವರ ಲಕ್ಷಣಗಳು

ಇದ್ದಕಿದ್ದಂತೆ ತೀವ್ರ ಜ್ವರ
ವಿಪರೀತ ತಲೆನೋವು
ಡೆಂಗಿ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ
ಕಣ್ಣುಗಳ ಹಿಂಭಾಗ ನೋವು
ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು
ಉಚಿತ ಪರೀಕ್ಷೆ ಹಾಗು ಚಿಕಿತ್ಸೆ ಪಡೆಯಿರಿ
ವಸಡು ಮತ್ತು ಮೂಗಿನಲ್ಲಿ ರಕ್ತಸ್ರಾವ
ಚರ್ಮದ ಮೇಲೆ ಗಂದೆಗಳು

ಚಿಕಿತ್ಸೆ ಮತ್ತು ಅನುಸರಣೆ

• ಡೆಂಗಿ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ, ನಿರ್ಲಕ್ಷಿಸಬೇಡಿ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ಅಗತ್ಯ ಚಿಕಿತ್ಸೆಯನ್ನು ಪಡೆಯಿರಿ. ಸ್ವಯಂ ಚಿಕಿತ್ಸೆ ಮಾಡದಿರಿ.
• ಹೆಚ್ಚು ನೀರು ಹಾಗೂ ಇತರ ದ್ರವಾಹಾರಗಳಾದ ಒ.ಆರ್.ಎಸ್, ಎಳನೀರು, ನಿಂಬೆಹಣ್ಣಿನ ಶರಬತ್ತುಗಳನ್ನು ಸೇವಿಸಿ, ನಿರ್ಜಲೀಕರಣವನ್ನು ತಡೆಗಟ್ಟಿ ಅಗತ್ಯ ವಿಶ್ರಾಂತಿಯನ್ನು ಪಡೆಯಿರಿ.
• ಜ್ವರದಿಂದ ಗುಣಮುಖರಾದ ನಂತರ ವಾಂತಿ, ಹೊಟ್ಟೆನೋವು, ಮೂತ್ರದ ಪ್ರಮಾಣ ಕಡಿಮೆಯಾಗುವುದು, ಅತಿಯಾದ ನಿಶ್ಯಕ್ತಿ, ಮಂಪರು, ಸಿಡಿಮಿಡಿಗೊಳ್ಳುವಿಕೆ, ತಣ್ಣನೆಯ ಹಾಗೂ ಬಿಳಿಚಿದ ಚರ್ಮ ಇಂತಹ ಲಕ್ಷಣಗಳು ಕಂಡುಬಂದಲ್ಲಿ ಶೀಘ್ರವೇ ವೈದ್ಯರನ್ನು ಸಂಪರ್ಕಿಸಿ.
ಮೃದುವಾದ ಆಹಾರವನ್ನು ಸೇವಿಸಿ ಹಾಗೂ ಹಗಲು ಹೊತ್ತಿನಲ್ಲಿಯೂ ಸೊಳ್ಳೆಪರದೆಯನ್ನು ಬಳಕೆ ಮಾಡುವುದು ಅಗತ್ಯವಾಗಿದೆ.

ಡೆಂಗಿ ನಿಯಂತ್ರಣ ಕ್ರಮಗಳು

ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರೆಲ್, ಬಕೆಟ್ಗಳನ್ನು ಮುಚ್ಚಿಡಿ.
ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮವಹಿಸಿ ಹಾಗೂ ವಿಲೇವಾರಿ ಮಾಡಿ.

ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ
ಸೊಳ್ಳೆ ಪರದೆ
ಸೊಳ್ಳೆ ನಿರೋಧಕಗಳನ್ನು ಬಳಸಿ
ದೇಹ ಮುಚ್ಚುವಂತಹ ಬಟ್ಟೆ ಧರಿಸಿ

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...