‘ನಾವು ಲವ್ ಜಿಹಾದ್ ಬಲೆಗೆ ಬೀಳಲ್ಲ ‘ : ದೇವರ ಹೆಸರಲ್ಲಿ ಪ್ರಮಾಣ ಮಾಡಿದ 200 ಕ್ಕೂ ಹೆಚ್ಚು ಯುವತಿಯರು

ಗದಗ : ನಾವು ಲವ್ ಜಿಹಾದ್ ಗೆ ಒಳಗಾಗೋದಿಲ್ಲ ಎಂದು 200 ಮಂದಿ ಯುವತಿಯರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಹಸ್ರಾರ್ಜುನ ಮಹಾರಾಜ್ ಜಯಂತೋತ್ಸವದ ಅಂಗವಾಗಿ ಗದಗ ನಗರದ ವಿಠಲಾರೂಢ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಮಂದಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಲವ್ ಜಿಹಾದ್ಗೆ ಒಳಗಾಗದಂತೆ ಮಹಿಳೆಯರು, ಮಕ್ಕಳಿಗೆ ದೇವರ ಮೇಲೆ ಪ್ರಮಾಣ ಮಾಡುತ್ತಿದ್ದೇವೆ. ಊರಲ್ಲಿ, ಓಣಿಯಲ್ಲಿ, ಶಾಲಾ, ಕಾಲೇಜಿನಲ್ಲಿ ಅನ್ಯ ಧರ್ಮದ ಯುವಕರ ಜೊತೆ ಪ್ರೀತಿ, ಪ್ರೇಮ, ಸ್ನೇಹದ ಬಲೆಗೆ ಬೀಳಲ್ಲ, ಅನ್ಯ ಧರ್ಮದ ಸ್ನೇಹ, ಪ್ರೀತಿ ಒಪ್ಪುವುದಿಲ್ಲ, ಧಿಕ್ಕರಿಸುತ್ತೇನೆ. ಯುವಕ ಪ್ರೀತಿ, ಪ್ರೇಮ ಅಂತ ಬೆನ್ನುಬಿದ್ದರೇ ತಂದೆ-ತಾಯಿ ಗಮನಕ್ಕೆ ತರುತ್ತೇನೆ. ಅಥವಾ ನಾವೇ ಬುದ್ದಿ ಕಲಿಸುತ್ತೇವೆ ಎಂದು ಗದಗದ ಎಸ್ಎಸ್ಕೆ ಸಮಾಜದ ಯುವತಿಯರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ರಾಜ್ಯದ ಲವ್ ಜಿಹಾದ್ ವಿಚಾರ ಮತ್ತೆ ಸುದ್ದಿಯಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಇದನ್ನು ತಡೆಯುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read