ನಟ ಜಗ್ಗೇಶ್ ಮನೆಯಲ್ಲಿ ನಾವು ಯಾವುದೇ ತಪಾಸಣೆ ಮಾಡಿಲ್ಲ, ಪತ್ನಿ ಲಾಕೆಟ್ ಕೊಟ್ಟಿದ್ದಾರೆ : DFO ರವೀಂದ್ರ ಸ್ಪಷ್ಟನೆ

ಬೆಂಗಳೂರು : ನಟ ಜಗ್ಗೇಶ್ ಮನೆಯಲ್ಲಿ ನಾವು ಯಾವುದೇ ತಪಾಸಣೆ ನಡೆಸಲಿಲ್ಲ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹೇಳಿದ್ದಾರೆ.

ಹುಲಿ ಉಗುರು ಪೆಂಡೆಂಟ್ ಪ್ರಕರಣ ಸಂಬಂಧ ಅರಣ್ಯಾಧಿಕಾರಿಗಳು ಇಂದು ನಟ ಜಗ್ಗೇಶ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ‘ ನಟ ಜಗ್ಗೇಶ್ ಮನೆಯಲ್ಲಿ ನಾವು ಯಾವುದೇ ತಪಾಸಣೆ ನಡೆಸಲಿಲ್ಲ. ಪತ್ನಿ ಲಾಕೆಟ್ ಕೊಟ್ಟಿದ್ದಾರೆ . ಜಗ್ಗೇಶ್ ಹೋಗುವಾಗ ಕೊಟ್ಟು ಹೋಗಿದ್ದಾರೆ. ಇಂದು ಜಗ್ಗೇಶ್ ಮನೆಯಲ್ಲಿ ಇರಲಿಲ್ಲ, ತಾಯಿ ಕೊಟ್ಟಿದ್ದು ಪೂಜೆ ಮಾಡಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ ಎಂದರು.

ಜಗ್ಗೇಶ್ ಬಳಿ ಇರುವುದು 40 ವರ್ಷದ ಹಳೆಯದಾದ ಪೆಂಡೆಂಟ್. ಹೀಗಾಗಿ ಡಿಎನ್ಎ ನಡೆಸಲು ಡೆಹ್ರಾಡೂನ್ ಲ್ಯಾಬ್ಗೆ ಕಳುಹಿಸಲಾಗುತ್ತದೆ. ಹುಲಿಯ ಉಗುರಾಗಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read