ಇಂಗ್ಲೆಂಡ್​ಗೆ ಹೋಗಬೇಕಿದ್ದ ಯುವತಿ ಸಹೋದರನ ಮದುವೆಗೆ‌ ದಿಢೀರ್ ಬಂದು ಅಚ್ಚರಿಗೊಳಿಸಿದ ಕ್ಷಣ; ಭಾವುಕ ವಿಡಿಯೋ ವೈರಲ್​

ತನ್ನ ಸಹೋದರನ ಮದುವೆಯ ಸಂದರ್ಭದಲ್ಲಿಯೇ ಇಂಗ್ಲೆಂಡ್​ಗೆ ಹೋಗಬೇಕಿದ್ದ ಸಹೋದರಿಯೊಬ್ಬಳು ಹಂಚಿಕೊಂಡ ವಿಡಿಯೋ ಈಗ ವೈರಲ್​ ಆಗಿದ್ದು, ಜನರು ಭಾವುಕರಾಗಿದ್ದಾರೆ. ತನ್ನ ಸಹೋದರನ ಮದುವೆಗೆ ಹೋಗಲು ಸಾಧ್ಯವಾಗಿಲ್ಲ ಎಂದು ಬೇಸರಿಸಿದ ಯುವತಿ ನಂತರ ಮುಂದಿನ ವಿಮಾನದಲ್ಲಿ ಭಾರತಕ್ಕೆ ಹಿಂತಿರುಗಲು ನಿರ್ಧರಿಸಿ ಮದುವೆಯಲ್ಲಿ ತನ್ನ ಕುಟುಂಬವನ್ನು ಅಚ್ಚರಿಗೊಳಿಸಿದ ಘಟನೆ ಇದಾಗಿದೆ.

ಶ್ರದ್ಧಾ ಶೇಲಾರ್ ಎನ್ನುವವರು ಇದನ್ನು ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಸಹೋದರನ ಮದುವೆಗೆ ಹಾಜರಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. ಜನಸಮೂಹದ ನಡುವೆ ಈಕೆ ಮದುವೆಗೆ ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಆಕೆಯನ್ನು ಅನಿರೀಕ್ಷಿತವಾಗಿ ನೋಡಿದ ಪೋಷಕರು ಕುಣಿದು ಕುಪ್ಪಳಿಸಿ ಆಕೆಯನ್ನು ತಬ್ಬಿಕೊಳ್ಳಲು ಓಡಿ ಬರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಡಿಸೆಂಬರ್ 9 ರಂದು ಪೋಸ್ಟ್ ಮಾಡಲಾದ ವಿಡಿಯೋ ಇದಾಗಲೇ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಜನರು ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ.

https://www.youtube.com/watch?v=7WMKA4Iv_BA&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read