ವ್ಯಕ್ತಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮವು ಉತ್ತಮ ವೇದಿಕೆಯಾಗಿದೆ. ಇದು ಕಡೆಗಣಿಸಲ್ಪಡುವ ಸ್ಥಳಗಳಿಂದ ಪ್ರತಿಭೆಯನ್ನು ಹೊರತರುತ್ತದೆ. ದೃಷ್ಟಿಹೀನ ಮಗುವೊಂದು 90 ರ ಬಾಲಿವುಡ್ ಹಾಡನ್ನು ಹಾಡುವ ಹೃದಯಸ್ಪರ್ಶಿ ವೀಡಿಯೊ ಇತ್ತೀಚೆಗೆ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ.
ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಬಾಲಕನೊಬ್ಬ ಮೈಕ್ ಹಿಡಿದುಕೊಂಡು ಅಜಯ್ ದೇವಗನ್ ಅಭಿನಯದ ಕಚ್ಚೆ ಧಾಗೆ ಚಿತ್ರದ ಊಪರ್ ಖುದಾ ಆಸ್ಮಾನ್ ನೀಚೆ ಹಾಡನ್ನು ಪೂರ್ಣ ಸಮರ್ಪಣೆಯೊಂದಿಗೆ ಹಾಡುವುದನ್ನು ನೋಡಬಹುದಾಗಿದೆ.
ಹುಡುಗನನ್ನು ಅವನ ಅಂಧ ಸ್ನೇಹಿತರು ಸುತ್ತುವರೆದಿದ್ದಾರೆ ಮತ್ತು ಅವರೆಲ್ಲರೂ ತಮ್ಮ ಶಾಲಾ ಸಮವಸ್ತ್ರವನ್ನು ಧರಿಸಿದ್ದಾರೆ. ಗಾಯಕ ಸುಖ್ವಿಂದರ್ ಸಿಂಗ್ ಅವರು ಹಾಡಿರುವ ಈ ಹಾಡಿಗೆ ಬಾಲಕ ಹಾಡಿದ್ದನ್ನು ಕಂಡು ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.