ಬೇಸಿಗೆಯ ಉಷ್ಣತೆಯು ಗಗನಕ್ಕೇರುತ್ತಿದ್ದು ಜನ ಸೆಖೆಯಿಂದ ಪಾರಾಗಲು ಹಲವಾರು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹಾಸ್ಯಮಯವಾಗಿ ಅಸಾಧಾರಣ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಉಲ್ಹಾಸ್‌ನಗರದ ಪುರುಷ ಮತ್ತು ಯುವತಿಯೊಬ್ಬರು ರಸ್ತೆಯ ಮಧ್ಯದಲ್ಲಿ ಚಲಿಸುವಾಗ ಸ್ಕೂಟಿಯಲ್ಲಿ ಸ್ನಾನ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಭಾರತದಾದ್ಯಂತ ಹೆಚ್ಚುತ್ತಿರುವ ತಾಪಮಾನದ ನಡುವೆ ಈ ವೀಡಿಯೊ ವೈರಲ್ ಆಗಿದೆ, ಉಲ್ಲಾಸ್‌ನಗರದ ಸೆಕ್ಟರ್ 17 ಮುಖ್ಯ ಸಿಗ್ನಲ್ ಅಲ್ಲಿ ಈ ರೀತಿ ಸ್ಕೂಟಿಯಲ್ಲಿ ಕೂತು ಸ್ನಾನ ಮಾಡಿದ ಜೋಡಿ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಸ್ಕೂಟಿಯಲ್ಲಿ ಹಿಂಬದಿ ಕುಳಿತಿರುವ ಯುವತಿ, ಚಾಲಕ ಸೇರಿದಂತೆ ತನ್ನ ಮೇಲೆ ಬಕೆಟ್ ನಿಂದ ನೀರು ಸುರಿದುಕೊಳ್ಳುತ್ತಾರೆ. ಇದನ್ನ ಕಂಡು ಸಿಗ್ನಲ್‌ನಲ್ಲಿದ್ದ ಜನ ನಕ್ಕಿದ್ದಾರೆ. ಸ್ಕೂಟಿಯಲ್ಲಿ ಚಲಿಸುತ್ತಿರುವಾಗ ಇಬ್ಬರೂ ಸ್ನಾನ ಮಾಡುವುದನ್ನು ವೀಡಿಯೊ ತೋರಿಸುತ್ತಿರುವುದರಿಂದ, ಇದು ರಸ್ತೆಯಲ್ಲಿರುವ ಜನರ ಗಮನವನ್ನು ಸೆಳೆಯಲು ಪ್ರಚಾರದ ಸ್ಟಂಟ್ ಎಂಬುದು ಸ್ಪಷ್ಟವಾಗಿದೆ.
ಥಾಣೆ ನಗರ ಪೊಲೀಸರು ವೀಡಿಯೊಗೆ ಪ್ರತಿಕ್ರಿಯಿಸಿದ್ದು ಅಗತ್ಯ ಕ್ರಮಕ್ಕಾಗಿ ಥಾಣೆಯ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಮಾಹಿತಿಯನ್ನು ವರದಿ ಮಾಡಿರೋದಾಗಿ ತಿಳಿಸಿದ್ದಾರೆ.
https://twitter.com/ItsAamAadmi/status/1658000635789479937?ref_src=twsrc%5Etfw%7Ctwcamp%5Etweetembed%7Ctwterm%5E1658000635789479937%7Ctwgr%5E7d3864666c9489a53a7b823f2b4bcdc179127ee9%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fwatchunusualsceneunfoldsinulhasnagarascouplespottedbathinginpubliconscooty-newsid-n501306228
https://twitter.com/ItsAamAadmi/status/1658000635789479937?ref_src=twsrc%5Etfw%7Ctwcamp%5Etweetembed%7Ctwterm%5E1658006405578620931%7Ctwgr%5E7d3864666c9489a53a7b823f2b4bcdc179127ee9%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fwatchunusualsceneunfoldsinulhasnagarascouplespottedbathinginpubliconscooty-newsid-n501306228