Watch Video | ಬ್ಯಾಟ್ಸ್‌ ಮನ್‌ ಗೆ ಕೈ ಮುಗಿದ ಬೌಲರ್;‌ ಇದರ ಹಿಂದಿದೆ ತಮಾಷೆಯ ಕಾರಣ

ಸೋಮವಾರ ನಡೆದ ವಿಶ್ವಕಪ್ ಕ್ರಿಕೆಟ್ ನ 6 ನೇ ಪಂದ್ಯದ ವೇಳೆ ನೆದರ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡದ ನಡುವೆ ಸ್ವಾರಸ್ಯಕರ ಘಟನೆಯೊಂದು ನಡೆಯಿತು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ.

ನೆದರ್ಲೆಂಡ್ ನ ವೇಗಿ ಪೌಲ್ ವ್ಯಾನ್ ಮೀಕೆರೆನ್ ತನ್ನ ಕೈಗಳನ್ನು ಮಡಚಿ ಡ್ಯಾರಿಲ್ ಮಿಚೆಲ್‌ಗೆ ‘ಧನ್ಯವಾದ’ ಸಲ್ಲಿಸಿದರು. ಈ ಘಟನೆಯು ಮೊದಲ ಇನ್ನಿಂಗ್ಸ್ ನ 39 ನೇ ಓವರ್‌ನ ಎರಡನೇ ಎಸೆತದಲ್ಲಿ ಸಂಭವಿಸಿದೆ.

ಮಿಚೆಲ್ ತನ್ನ ಎಲ್ಲಾ ಶಕ್ತಿಯನ್ನು ಬಳಸಿ ವ್ಯಾನ್ ಮೀಕೆರೆನ್ ಎಸೆತವನ್ನು ನೇರವಾಗಿ ಹೊಡೆದರು. ಚೆಂಡನ್ನು ತುಂಬಾ ಬಲವಾಗಿ ಹೊಡೆದಿದ್ದು ಅದು ನಾನ್-ಸ್ಟ್ರೈಕರ್‌ನ ತುದಿಯಲ್ಲಿ ಸ್ಟಂಪ್‌ಗೆ ಬಡಿಯಿತು.

ಚೆಂಡಿನ ಹೊಡೆತದಿಂದ ಪಾರಾದ ವ್ಯಾನ್ ಮೀಕೆರೆನ್ ನಂತರ ತನ್ನ ಕೈಗಳನ್ನು ಮಡಚಿ ಮಿಚೆಲ್ ಅವರಿಗೆ ಧನ್ಯವಾದ ತಿಳಿಸಿದರು. ಬಾಲ್ ನ ಹೊಡೆತದಿಂದ ತಪ್ಪಿಸಿಕೊಂಡ ಪೌಲ್ ವ್ಯಾನ್ ಮೀಕೆರೆನ್ ತಮ್ಮನ್ನು ಹೊಡೆಯದಿದ್ದಕ್ಕಾಗಿ ‘ಧನ್ಯವಾದ’ ದ ಭಾವ ತೋರಿಸಿದರು. ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಿಚೆಲ್ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 48 (47) ರನ್ ಗಳಿಸಿ ನಿರ್ಗಮಿಸಿದರು. ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ 99 ರನ್ ಗಳಿಂದ ವಿಜಯ ಸಾಧಿಸಿತು.

https://www.youtube.com/watch?v=0su7VX-tepg

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read