ಕೋಲ್ಕತಾ: ಬ್ಯಾಂಕಾಕ್‌ಗೆ ಹೋಗುವ ವಿಮಾನವನ್ನು ಹತ್ತಬೇಕಿದ್ದ ವ್ಯಕ್ತಿಯನ್ನು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತನ ಗುಟ್ಕಾ ಪ್ಯಾಕೆಟ್‌ಗಳಲ್ಲಿ ಇದ್ದ USD 40,000 (ಸುಮಾರು 33 ಲಕ್ಷ ರೂಪಾಯಿ) ವಶಪಡಿಸಿಕೊಳ್ಳಲಾಗಿದೆ.
ಟ್ವಿಟರ್‌ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಕೋಲ್ಕತಾ ಕಸ್ಟಮ್ಸ್ ಇಲಾಖೆ ಈ ವಿಷಯ ತಿಳಿಸಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನ ಚೆಕ್-ಇನ್ ಬ್ಯಾಗೇಜ್‌ನ ಭದ್ರತಾ ತಪಾಸಣೆಯ ನಂತರ ಬಂಧಿಸಲಾಯಿತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜನವರಿ 5 ರಂದು ಮುಂಬೈನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸುಮಾರು 2,000 ಅಘೋಷಿತ ಸಿಗರೇಟ್ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದರು. ಲಂಡನ್‌ಗೆ ರಫ್ತು ಮಾಡಲು ಹೊರಟಿದ್ದ ಈ ಪೆಟ್ಟಿಗೆಗಳು ಸುಮಾರು 4 ಲಕ್ಷ ಸಿಗರೇಟ್ ತುಂಡುಗಳನ್ನು ಹೊಂದಿದ್ದವು ಮತ್ತು ಸುಮಾರು USD 30,000 ಮೌಲ್ಯದ್ದಾಗಿದ್ದವು.
ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಈ ತಿಂಗಳ ಆರಂಭದಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಅಧಿಕಾರಿಗಳು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 4.47 ಕೆಜಿ ಹೆರಾಯಿನ್ ಮತ್ತು 1.596 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.