Watch Video | ಮದುವೆ ಮನೆಗೆ ಕತ್ತೆ ಗಾಡಿಯೇರಿ ಬಂದ ಮದುಮಕ್ಕಳು

ಯಾವುದೇ ಜೋಡಿಯ ಬಾಳಿನಲ್ಲೂ ಮದುವೆಯ ದಿನ ಭಾರೀ ವಿಶೇಷವಾದ ಸಂದರ್ಭ. ಮದುಮಕ್ಕಳು ತಮ್ಮ ಮಿಕ್ಕ ಜೀವನವನ್ನೆಲ್ಲಾ ಹಂಚಿಕೊಂಡು ಬಾಳಲು ನಿರ್ಧರಿಸುವ ಈ ಸುಸಂದರ್ಭವನ್ನು ಸ್ಮರಣೀಯವಾಗಿಸಲು ಚಿತ್ರವಿಚಿತ್ರ ಥೀಂಗಳಲ್ಲೆಲ್ಲಾ ಆಚರಣೆಗಳನ್ನು ಮಾಡುವ ಮೂಲಕ ಮದುವೆ ಸಮಾರಂಭಗಳ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿವೆ.

ಪಾಕಿಸ್ತಾನದಲ್ಲಿ ಹಸೆಮಣೆ ಏರುತ್ತಿರುವ ನವದಂಪತಿಗಳು ಮದುವೆ ಮನೆಗೆ ಕತ್ತೆ ಗಾಡಿಯನ್ನೇರಿ ಬರುತ್ತಿರುವ ವಿಡಿಯೋವೊಂದು ಹೀಗೆ ವೈರಲ್‌ ಆಗಿದೆ. ಕತ್ತೆ ಗಾಡಿಗೆ ಹೂಗಳಿಂದ ಸಿಂಗಾರ ಮಾಡಲಾಗಿದ್ದು, ಈ ವಿನೂತನ ಪ್ರಯೋಗವು ’ಹೀಗೂ ಮಾಡ್ತಾರಾ!’ ಎಂದು ಉದ್ಗಾರ ತೆಗೆಯುವಂತೆ ಮಾಡಿದೆ.

ಮದುಮಕ್ಕಳು ದುಬಾರಿ ಉಡುಗೆಯಲ್ಲಿ ಮಿಂಚುತ್ತಿದ್ದು, ಕತ್ತೆ ಗಾಡಿಯಲ್ಲಿ ಆಗಮಿಸುತ್ತಿರುವುದು ಒಂದಕ್ಕೊಂದು ತದ್ವಿರುದ್ಧವಾಗಿದ್ದು, ಈ ವೈಪರಿತ್ಯದಿಂದಲೇ ವಿಡಿಯೋ ಭಾರೀ ವೈರಲ್ ಆಗುವಂತೆ ಮಾಡಿದೆ.

ಪಾಕಿಸ್ತಾನದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರವನ್ನು ಹೀಗೊಂದು ವಿಡಂಬನಾತ್ಮಕವಾದ ರೀತಿಯಲ್ಲಿ ತೋರಿಸುವ ಪ್ರಯತ್ನ ನವದಂಪತಿಗಳದ್ದು ಎಂದು ಅನೇಕರು ಕಾಮೆಂಟ್‌ ಸಹ ಮಾಡಿದ್ದಾರೆ.

https://youtu.be/EKkvdDqctWE

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read