Viral Video | ನವವಿವಾಹಿತೆಯ ಕುಣಿತಕ್ಕೆ ಮನಸೋತ ನೆಟ್ಟಿಗರು

ಅದಾಗ ತಾನೇ ಮದುವೆಯಾಗಿರುವ ಮಹಿಳೆಯೊಬ್ಬರು ’ದಾರು ಬದ್ನಾಮ್’ ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರ್ಪ್ರೀತ್‌ ಕೌರ್‌ ಎಂಬುವವರು ಶೇರ್‌ ಮಾಡಿರುವ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿದೆ.

ಹೊಸ ಬಟ್ಟಯಲ್ಲಿ ಮಿಂಚುತ್ತಿರುವ ನವವಿವಾಹಿತೆ ಭರ್ಜರಿ ಸ್ಟೆಪ್ ಹಾಕುತ್ತಿದ್ದರೆ, ಅದಕ್ಕೆ ತಕ್ಕಂತೆ ’ದಾರು ಬದ್ನಾಮ್’ ಹಾಡು ಹಿನ್ನೆಲೆಯಲ್ಲಿ ಪ್ರಸಾರವಾಗುತ್ತಿದೆ. ಮಹಿಳೆಯ ಚಿಂದಿ ಸ್ಟೆಪ್‌ಗಳು ಹಾಗೂ ಮೈಕುಣಿತಗಳು ನೆಟ್ಟಿಗರ ಮನಸೂರೆಗೊಂಡಿವೆ.

ಈ ವಿಡಿಯೋಗೆ 109,000 ಲೈಕ್‌ಗಳು ಬಂದಿವೆ. “ಎಂಥ ಪವರ್‌ಫುಲ್ ಪ್ರದರ್ಶನ. ನನಗೆ ಇಷ್ಟವಾಯಿತು,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೇ ರೀತಿ ಅನೇಕ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.

ಪಂಜಾಬಿ ಗಾಯಕರಾದ ಕಮಲ್ ಕಹ್ಲೋನ್ ಹಾಗೂ ಪರಮ್ ಸಿಂಗ್ ’ದಾರು ಬದ್ನಾಮ್’ಗೆ ದನಿಗೂಡಿಸಿದ್ದಾರೆ. ಮಂಜಿಂದರ್‌ ಮಾನ್ ಹಾಗೂ ಗ್ಯಾಗ್-ಏ ಬರೆದಿರುವ ಪಂಜಾಬೀ ಹಾಡುಗಳ ಪೈಕಿ ಈ ಹಾಡು ಅತ್ಯಂತ ಜನಪ್ರಿಯ ಹಾಡಾಗಿದೆ. 2016ರಲ್ಲಿ ಬಿಡುಗಡೆಯಾದ ಈ ಹಾಡು ಇಂದಿಗೂ ಸಖತ್‌ ಹಿಟ್‌ ಆಗಿ ಓಡುತ್ತಿದೆ.

https://youtu.be/lnN0dwdzcBA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read