ನಿತ್ಯ ಕಚೇರಿಗೆ ಹೋಗೋದು, ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡೋದು ಅನೇಕರಿಗೆ ನಿತ್ಯದ ಕಾಯಕ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ದೃಶ್ಯವೊಂದರಲ್ಲಿ ಕಂಪ್ಯೂಟರ್ ಮುಂದೆ ಮಂಗವೊಂದು ಕುಳಿತಿದ್ದು, ನೋಡೋಕ್ ಸಖತ್ ಫನ್ನಿಯಾಗಿದೆ.
ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಎನ್ನಲಾಗಿದ್ದು ರೈಲ್ವೆ ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತ ಮಂಗವು ಕೀಬೋರ್ಡ್ ಹಾಗೂ ಮೌಸ್ಗಳನ್ನು ಥೇಟ್ ಮನುಷ್ಯರಂತೆಯೇ ಚಲಾಯಿಸಿದೆ.
ಬೋಲ್ಪುರ್ ರೈಲ್ವೆ ನಿಲ್ದಾಣದ ವಿಚಾರಣಾ ಕಚೇರಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಥೇಟ್ ಅಧಿಕಾರಿಗಳಂತೆಯೇ ಕುರ್ಚಿಯ ಮೇಲೆ ಕುಳಿತ ಮಂಗವು ಕಂಪ್ಯೂಟರ್ನಲ್ಲಿ ಕೆಲಸ ಮಾಡುತ್ತಿರುವಂತೆ ಪೋಸ್ ಕೊಟ್ಟಿದೆ.
ಮಂಗವು ಕಂಪ್ಯೂಟರ್ ಚಲಾಯಿಸುತ್ತಿದ್ದ ರೀತಿಯನ್ನು ನೋಡಿದ್ರೆ ಅದು ಬಹಳ ದಿನಗಳಿಂದ ಅಧಿಕಾರಿಗಳು ಕಂಪ್ಯೂಟರ್ ಚಲಾಯಿಸೋದನ್ನು ಗಮನಿಸುತ್ತಿತ್ತು ಅನ್ನೋದಂತು ಸ್ಪಷ್ಟವಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಸಖತ್ ವೈರಲ್ ಆಗಿದೆ. ಕೋತಿಯ ಮಂಗಾಟವನ್ನು ನೋಡಿದ ಅಧಿಕಾರಿಗಳು ನಗುತ್ತಿರೋದನ್ನು ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದಾಗಿದೆ.